ಸೊರಬದಲ್ಲಿ ಕರ್ನಾಟಕ ಬಂದ್ ಸಂಪೂರ್ಣ

28sor2
Published on

ಸೊರಬ: ರೈತ ವಿರೋಧಿ ಕಾ್ದಯೆಳ ವಿರá-ದ್ಧ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಬಂದ್ ರೈತ ಸಂಘ ಹಾಗೂ ಹಸಿರುಸೇನೆ, ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಸಂಪೂರ್ಣ ಬೆಂಬಲಿಸಿದ ಪರಿಣಾಮ ಬಂದ್ ಯಶಸ್ವಿಯಾಯಿತು.

ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ವಾಹನಗಳ ಓಡಾಟ ವಿರಳವಾಗಿತ್ತು. ಬ್ಯಾಂಕ್ ಸೇರಿ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಿರುವುದು ರೈತ ವಿರೋಧಿ ನೀತಿಯಾಗಿದ್ದು ಕೂಡಲೇ ತಿದ್ದುಪಡಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಸಂಘಟನೆ ತಾಲೂಕು ಸಂಚಾಲಕ ರಾಜಪ್ಪ ಮಾಸ್ತರ್ ಮಾತನಾಡಿ, ಕೃಷಿಕರು ಮಾತ್ರ ಭೂಮಿ ಪಡೆಯಲು ಅವಕಾಶವಿದ್ದ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಬಂಡವಾಳಶಾಹಿಗಳಿಗೆ ಸರ್ಕಾರ ಭೂಕಬಳಿಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಇದರಿಂದ ಸಣ್ಣ ರೈತರು ಶ್ರೀಮಂತರಿಗೆ ಜಮೀನು ಮಾರುವ ಪರಿಸ್ಥಿತಿ ನಿರ್ವಣವಾಗಿ ಹಿಂದಿನ ಜೀತಪದ್ಧತಿಗೆ ಮರುಜೀವ ನೀಡುವ ಹುನ್ನಾರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಕೆ.ಮಂಜುನಾಥ್ ಹಳೇಸೊರಬ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತಾರಾ ಶಿವಾನಂದ್, ಶಿವಲಿಂಗೇಗೌಡ, ಮುಖಂಡರಾದ ಎಂ.ಡಿ.ಶೇಖರ್, ಎಚ್.ಗಣಪತಿ, ಈಶ್ವರಪ್ಪ ಕೊಡಕಣಿ, ಡಾ. ಜ್ಞಾನೇಶ್, ಸೀತಾ ಉಳವಿ, ಎಲ್.ಜಿ.ರಾಜಶೇಖರ, ಬಲೀಂದ್ರಪ್ಪ, ಉಮೇಶ್ ಪಾಟೀಲ್, ಜಯಪ್ಪ ಗೌಡ, ಜಯಶೀಲ ಗೌಡ, ಕಲ್ಲಪ್ಪ, ಚಂದ್ರಪ್ಪ ಮಾಸ್ತರ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net