ಸೊರಬ: ಶಾಂತಗೇರಿ ಬಸವೇಶ್ವರ ಸ್ವಾಮಿ ರಥೋತ್ಸವ ಸಂಪನ್ನ; ಉತ್ಸವಕ್ಕೆ ಮೆರುಗು ತುಂಬಿದ ಕಲಾಮೇಳಗಳು

SOR WWWWEEEBBB
Published on

ಸೊರಬ: ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ದೇವರ ಮಹಾರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವವು ಜಾನಪದ ಕಲಾಮೇಳಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಅರ್ಚಕ ಚಂದ್ರಶೇಖರಯ್ಯ ಹಿರೇಮಠ ಶಾಂತಗೇರಿ ನೇತೃತ್ವದಲ್ಲಿ ದೇವರಿಗೆ ರಕ್ಷಾಬಂಧನ, ಕುಂಭಾಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಒಂದು ಕಿಮೀ ದೂರದಲ್ಲಿರುವ ಹಕ್ಕಲ ಬಸವೇಶ್ವರ ದೇವಸ್ಥಾನದವರೆಗೂ ಮಹಾರಥ ಎಳೆಯಲಾಯಿತು. ಬಸವೇಶ್ವರ ನಂದಿಕೋಲು ಉತ್ಸವ, ಹರೂರು ಗ್ರಾಮದ ಶ್ರೀ ಮಾರಿಕಾಂಬದೇವಿ ಪಲ್ಲಕ್ಕಿ ಹಾಗೂ ಅಂಡಿಗೆ ಗ್ರಾಮದ ನಂದಿಕೋಲು ಉತ್ಸವ ಸಾಂಗವಾಗಿ ನೆರವೇರಿತು. ಬಸವೇಶ್ವರ ಹಾಗೂ ಮಾರಿದೇವತೆ ನಡುವೆ ಓಕುಳಿ, ಉಂಗುರ ಹುಡುಕುವ ಕಾರ್ಯಕ್ರಮಗಳು ನಡೆದವು. ವಾದ್ಯಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net