ಸೊರಬ ತಾಲೂಕಿನಲ್ಲಿ ಮುಂದುವರಿದ ಬಿರುಗಾಳಿ, ಮಳೆ

SOR RAIN WEB
Published on

ಸೊರಬ: ತಾಲೂಕಿನಾದ್ಯಂತ ಬಿರುಗಾಳಿ, ಮಳೆ ಬುಧವಾರ ಮುಂದುವರಿದಿದೆ. ಹಲವು ಮನೆಗಳ ಗೋಡೆ ಕುಸಿದಿದೆ ಹಾಗೂ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಕಂಬಗಳು ಬಾಗಿ ಅಪಾಯದ ಸ್ಥಿಯಲ್ಲಿ ನಿಂತಿವೆ.

ತಾಲೂಕಿನ ಹಾಲಗಳಲೆ, ಹೆಗ್ಗೋಡು ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು, ತಂತಿಗಳ ಮೇಲೆ ಮರಗಳು ಬಿದ್ದಿದ್ದು ಕಳೆದರೆಡು ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. ಒಂದು ವಾರದಿಂದ ಮರಗಳು ನಿರಂತವಾಗಿ ಧರಗೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಬೀಳುತ್ತಿವೆ. ಈ ನಡುವೆ ಮೆಸ್ಕಾಂ ಸಿಬ್ಬಂದಿ ನಿರಂತರವಾಗಿ ಮರಗಳನ್ನು ತೆರವು ಮಾಡಿದರೂ ಸರಣಿಯಂತೆ ಮರಗಳು ಗಾಳಿಗೆ ಬೀಳುತ್ತಿವೆ. ಅಲ್ಲದೆ ನಿರಂತರ ಮಳೆ-ಗಾಳಿಯಿಂದಾಗಿ ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ತಾಲೂಕಿನಲ್ಲಿ 200 ಹೆಕ್ಟರ್ ಜಮೀನು ಜಲಾವೃತವಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net