ಸೊರಬ: ಜೇಡಿಗೇರಿಯಲ್ಲಿ ಮರವೇರಿದ ಹೆಬ್ಬಾವು

SOR WEBBB
Published on

ಸೊರಬ: ತಾಲೂಕಿನ ಜೇಡಿಗೇರಿಯಲ್ಲಿ ಗುರುವಾರ ಹೆಬ್ಬಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಜೇಡಗೇರಿ-ಚೀಲನೂರು ಸಮೀಪದ ಜೋಳದ ಹೊಲದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲ ನಿಮಿಷಗಳಲ್ಲೇ ಮರವನ್ನೇರಿದೆ. ಸ್ಥಳಕ್ಕೆ ಆಗಮಿಸಿದ ಸೊರಬದ ಸ್ನೇಕ್ ರಿಯಾಜ್ ಮರವನ್ನೇರಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿ ಉಪವಲಯ ಅರಣ್ಯಾಧಿಕಾರಿ ಪರಶುರಾಮ್ ಅವರ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟರು. ಸ್ಥಳಿಯರು ತಂಡೋಪ ತಂಡವಾಗಿ ಆಗಮಿಸಿ, ಮರವನ್ನೇರಿದ್ದ ಹೆಬ್ಬಾವನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net