ಸೊರಬ: ಗುಡ್ಡದಹೊಸಳ್ಳಿ ಶ್ರೀ ಶನೈಶ್ಚರ ಸ್ವಾಮಿ ಪಲ್ಲಕ್ಕಿ ಉತ್ಸವ ಸಂಪನ್ನ

WEB sor
Published on

ಸೊರಬ: ತಾಲೂಕಿನ ಗುಡ್ಡದಹೊಸಳ್ಳಿಯಲ್ಲಿ ಶ್ರೀ ಶನೈಶ್ಚ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ವೀರಗಾಸೆ, ಭಜನೆ ಮೇಳದೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಶನಿವಾರ ಅಂಡಿಗೆ ಶ್ರೀಧರ್ ಜೋಯಿಸ್ ಹಾಗೂ ಅರ್ಚಕರಾದ ಮಂಜಪ್ಪ ತಲ್ಲೂರು, ಹೊಳೆಯಪ್ಪ ಕೆ.ಗುಡ್ಡದ ಹೊಸಹಳ್ಳಿ ಅವರ ನೇತೃತ್ವದಲ್ಲಿ ದೇವರಿಗೆ ಖಳಹೋಮ, ರುದ್ರಾಭಿಷೇಕ, ನವಗ್ರಹ ಪೂಜೆ, ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ, ಓಕುಳಿ, ಮಂಗಳಾರತಿ, ಹಣ್ಣುಕಾಯಿ ಪೂಜೆ ನೆರವೇರಿತು. ಪರಮೇಶ್ವರಪ್ಪ ಹಾಗೂ ಬಿಸಲಹಳ್ಳಿ ಪುರವಂತರಿಂದ ಭಜನೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಳಿಕ ಅನ್ನ ಸಂತರ್ಪಣೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net