ಸೈಬರ್ ಹೈಜಿನ್‌ನಿಂದ ವಂಚನೆಗೆ ಕಡಿವಾಣ

ct sjmit..
Published on

ಚಿತ್ರದುರ್ಗ: ನಮ್ಮ ಆರೋಗ್ಯ ರಕ್ಷಣೆಗಾಗಿ ನಾವು ಹೇಗೆ ಶುದ್ಧತೆಗೆ ಪ್ರಾಮುಖ್ಯತೆ ನೀಡುತ್ತೇವೆಯೋ ಹಾಗೆಯೇ ಸೈಬರ್ ವಂಚನೆಗಳಿಂದ ಪಾರಾಗಲು ಸೈರ್ ಸೆಕ್ಯೂರಿಟಿ-ಸೈಬರ್ ಶುದ್ಧತೆ ಮಹತ್ವವನ್ನು ಅರಿಯಬೇಕಿದೆ ಎಂದು ನಗರದ ಎಸ್‌ಜೆಎಂಐಟಿ ಕಾಲೇಜು ಪ್ರಾಚಾರ್ಯ ಡಾ.ಪಿ.ಬಿ.ಭರತ್ ಅಭಿಪ್ರಾಯಪಟ್ಟರು.

ಕಾಲೇಜಿನಲ್ಲಿ ಸೋಮವಾರ ಕಂಪ್ಯೂಟರ್ ಸೈನ್ಸ್ ವಿಭಾಗ ಏರ್ಪಡಿಸಿದ್ದ ಸೈಬರ್ ಹೈಜಿನ್ ತರಬೇತಿ ಉದ್ಘಾಟಿಸಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ, ಅಪರಾಧಗಳಿಗೆ ಸಿಲುಕದಿರಲು ಈ ತರಹದ ಸೈಬರ್ ತರಬೇತಿ ಕಾರ್ಯಕ್ರಮಗಳು ಅಗತ್ಯ ಮತ್ತು ಸಹಕಾರಿಯಾಗಿವೆ ಎಂದರು.

ಹೆಚ್ಚಾಗಿ ಸಾಮಾಜಿಕ ಜಾಲತಾಣ, ಇಂಟರ್‌ನೆಟ್ ಸೇವೆ ಬಳಸುವ ವಿದ್ಯಾರ್ಥಿಗಳು, ಯುವ ಜನರು ಸೈಬರ್ ಹೈಜಿನ್ ಕುರಿತು ಜಾಗೃತಿ ವಹಿಸುವುದರೊಂದಿಗೆ, ಸೈಬರ್ ಸೆಕ್ಯೂರಿಟಿ ಕುರಿತು ಜನಸಾಮನ್ಯರಿಗೂ ಅರಿವು ಮೂಡಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಸೈಬರ್‌ವಾಲ್ ಗ್ಲೋಬಲ್ ಸೆಲ್ಯುಷನ್ಸ್ ನಿರ್ದೇಶಕ ಸುನಿಲ್ ಆವ್ತಿ ಉಪನ್ಯಾಸ ನೀಡಿದರು.

ಬ್ರೈಟ್‌ಮೈಂಡ್ ಅಕಾಡೆಮಿ ನಿರ್ದೇಶಕ ರಾಘವೇಂದ್ರ, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಜಿ. ಕುಮಾರಸ್ವಾಮಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಕೃಷ್ಣಾರೆಡ್ಡಿ, ಐಕ್ಯೂಎಸಿ ಸಂಚಾಲಕ ಡಾ.ಎಂ.ಎಂ. ರಾಜೇಶ್, ಎಐಸಿಟಿಇ ಸಂಚಾಲಕಿ ಡಾ.ಬಿ.ಜಿ.ದೇವಿಕಾ, ಪ್ರೊ.ಬೀನಾ ಶೆರಿಲ್ ಇದ್ದರು.

ಪಿ.ಕೆ. ಪ್ರಣತಿ ಪ್ರಾರ್ಥಿಸಿದರು. ಕೇಸರ್‌ಮಲನ್ ಸ್ವಾಗತಿಸಿ, ಎಸ್. ಸಂಜನಾಗೌಡ ವಂದಿಸಿದರು. ಕೆ. ರುಚಿತಾ, ಎ. ಶ್ರೇಯಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net