ಸೈಬರ್ ವಂಚನೆ ಜಾಗೃತಿ ಅಗತ್ಯ

Cyber ​​fraud awareness is essential
Cyber ​​fraud awareness is essential
Published on

ಇಳಕಲ್ಲ (ಗ್ರಾ) : ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್‌ಗೆ ಬರುವ ಅನಧಿಕೃತ ಲಿಂಕ್ ಹಾಗೂ ಆ್ಯಪ್‌ಗಳಿಗೆ ಸ್ಪಂದಿಸಬೇಡಿ ಎಂದು ಶಹರ ಪೊಲೀಸ್ ಠಾಣೆ ಪಿಎಸ್‌ಐ ಷಹಜಹಾನ ನಾಯಕ ಮನವಿ ಮಾಡಿದ್ದಾರೆ.

ನಗರದಲ್ಲಿ ಸೈಬರ್ ವಂಚನೆಗಳ ಕುರಿತು ಜಾಗೃತಿ ಮೂಡಿಸಲು ಶಹರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡ ಆಟೋ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ಹೆಸರಿನಲ್ಲಿ ಕರೆಮಾಡಿ ಖಾತೆ ಸಂಖ್ಯೆ, ಒಟಿಪಿ ಕೇಳಿ ವಂಚನೆ ಮಾಡಲಾಗುತ್ತಿದೆ. ಈ ಕುರಿತು ಎಚ್ಚರ ವಹಿಸಬೇಕು ಎಂದರು.

ಬೇಸಿಗೆಕಾಲದಲ್ಲಿ ಮನೆಗೆ ಬೀಗ ಹಾಕಿ ಹೊರಗೆ ಅಥವಾ ಮಹಡಿಯ ಮೇಲೆ ಮಲಗುವುದರಿಂದ ಕಳ್ಳತನದ ಸಾಧ್ಯತೆ ಹೆಚ್ಚಿರುತ್ತದೆ. ಚಿನ್ನ, ಬೆಳ್ಳಿ ಒಡವೆಗಳನ್ನು ಬ್ಯಾಂಕ್ ಲಾಕರ್‌ನಲ್ಲಿಡಬೇಕು. ಮಹಿಳೆಯರು ಚಿನ್ನದ ಆಭರಣ ಧರಿಸಿ ವಾಯುವಿಹಾರಕ್ಕೆ ತೆರಳಬಾರದು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net