ಸೈಬರ್ ಅಪರಾಧ ತಡೆ ಕುರಿತು ಮುಖಾಮುಖಿ ಇಂದು

Mukhamukhi
Published on

ಚಿತ್ರದುರ್ಗ: ಸೈಬರ್ ಅಪರಾಧ ನಿಯಂತ್ರಣ ಕುರಿತು ಇದೇ ಮೊದಲ ಬಾರಿ ನಗರದ ವಾಸವಿ ಮಹಲ್‌ನಲ್ಲಿ ಫೆ. 1ರಂದು ಸಂಜೆ 5ರಿಂದ ರಾತ್ರಿ 8.30ರ ವರೆಗೂ ಪೊಲೀಸ್ ಅಧಿಕಾರಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಧನರಾಜ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆ, ನಮ್ಮ ಮತ್ತು ಆರ್ಯವೈಶ್ಯ ಸಂಘದಿಂದ ಸೈಬರ್ ವಂಚನೆ ತಡೆಯುವ ಉದ್ದೇಶದೊಂದಿಗೆ ಮುಖಾಮುಖಿ ಆಯೋಜಿಸಲಾಗಿದೆ. ಸೈಬರ್ ಕ್ರೈ ವಿಭಾಗದ ಪಿಐ ಎನ್.ವೆಂಕಟೇಶ್ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿದ್ದಾರೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಕಾರ್ತಿಕ್ ಮಾತನಾಡಿ, ಹೂಡಿಕೆ, ಸಾಲದ ಆ್ಯಪ್‌ಗಳು, ಉದ್ಯೋಗದ ಹೆಸರಿನಲ್ಲಿ ವಂಚನೆ, ಪ್ರತೀಕಾರದ ಅಶ್ಲೀಲತೆ ಇನ್ನಿತರೆ ವಂಚನೆಗಳಿಗೆ ಒಳಗಾಗುವುದನ್ನು ತಪ್ಪಿಸಲು, ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವಾಗ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಪೊಲೀಸ್ ಇಲಾಖೆಯ ಸಲಹೆ ಪಡೆಯಬಹುದು ಎಂದು ತಿಳಿಸಿದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಖಾಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ವಿಜಯ್‌ರಾಜ್ ಟೀಕಾ, ಉಪಾಧ್ಯಕ್ಷ ಕಾರ್ತಿಕ್, ಶ್ರೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net