

ತರೀಕೆರೆ: ಮಕ್ಕಳು ಸೈಬರ್ ಅಪರಾಧಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಪಿಎಎಸ್‌ಐ ಆನಂದ್ ಪಾವಸ್ಕರ್ ಹೇಳಿದರು.
ಪಟ್ಟಣದ ಸಾಯಿ ಇಂಟರ್‌ನ್ಯಾಷನಲ್ ಶಾಲೆಗೆ ಭೇಟಿ ನೀಡಿ ಶಾಲಾ ವಾಹನಗಳ ದಾಖಲೆ ಪರಿಶೀಲಿಸಿದ ಬಳಿಕ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು. ಮಕ್ಕಳು ಮೊಬೈಲ್ ಗೀಳು ಅಂಟಿಸಿಕೊಂಡರೆ ಭವಿಷ್ಯಕ್ಕೆ ಕುತ್ತು ಬರುವ ಅಪಾಯವಿದೆ. ಸಾಮಾಜಿಕ ಜಾಲತಾಣದಿಂದ ದೂರವಿರಬೇಕು. ವಾಹನ ಚಾಲಕರು ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಬಾರದು. ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ಸಾಯಿ ಇಂಟರ್‌ನ್ಯಾಷನಲ್ ಶಾಲೆ ಪ್ರಾಚಾರ್ಯ ಎಂ.ಪಿ.ಪ್ರಶಾಂತ್, ಸಹ ಶಿಕ್ಷಕರಾದ ಈರಪ್ಪ, ನವೀನ್ ಪೆನ್ನಯ್ಯ ಇತರರಿದ್ದರು.