ಸೈನಿಕರನ್ನು ಎಲ್ಲರೂ ಗೌರವಿಸಬೇಕು

20 NRD-4
Published on

ನರಗುಂದ: ಜೀವದ ಹಂಗು ತೊರೆದು ಗಡಿ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ತ್ಯಾಗ, ಶಿಸ್ತು, ಕಾರ್ಯದ ಶೈಲಿಯನ್ನು ಪ್ರತಿಯೊಬ್ಬರೂ ಗೌರವಿಸುವಂತಾಗಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿರುವ ತಾಲೂಕಿನ ಕೊಣ್ಣೂರ ಗ್ರಾಮದ ವೀರಯೋಧರಾದ ಬಸವರಾಜ ಅಣ್ಣಿಗೇರಿ, ರವಿ ವಾಸನ, ಬಸವರಾಜ ಸುಣಗಾರ, ರಾಜೇಶ ಸಾಳಿಗೌಡ್ರ ಅವರನ್ನು ಶುಕ್ರವಾರ ಸತ್ಕರಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬ ನಾಗರಿಕರು ರೈತ ಮತ್ತು ಸೈನಿಕರನ್ನು ಗೌರವದಿಂದ ಕಾಣಬೇಕು. ಇಂದಿನ ಕಾಲದ ಬಹುತೇಕ ಯುವಕರು ದುಶ್ಚಟಗಳಿಗೆ ಬಲಿಯಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸದೃಢ ರಾಷ್ಟ್ರ ನಿರ್ವಣಕ್ಕಾಗಿ ಎಲ್ಲರೂ ಉತ್ತಮ ಆರೋಗ್ಯ ಹೊಂದಬೇಕು’ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಪಿ.ಡಿ. ಕಾಲವಾಡ, ಶ್ರೀಕಾಂತ ಕುಲಕರ್ಣಿ, ಶಿವಾನಂದ ಶೇಬಣ್ಣವರ ಮಾತನಾಡಿದರು. ಕೊಣ್ಣೂರ ಗ್ರಾಪಂ ಅಧ್ಯಕ್ಷೆ ಕಸ್ತೂರೆವ್ವ ಬಂದೋಜಿ, ಶೇಖರಗೌಡ ಸಾಳಿಗೌಡ್ರ, ಆನಂದ ನರಗುಂದ, ಮಲ್ಲನಗೌಡ ಸಾಳಿಗೌಡ್ರ, ಬಿ.ಎಫ್. ರಂಗಣ್ಣವರ, ರಾಮನಗೌಡ ಸಾಳಿಗೌಡ್ರ, ಪಿ.ಕೆ. ಕಡ್ಡಿ, ಸೋಮಲಿಂಗ ಹಡಪದ, ಬಸವರಾಜ ವಾಸನ, ಶರಣಪ್ಪ ಮಡಿವಾಳರ, ಇತರರು ಉಪಸ್ಥಿತರಿದ್ದರು. ಶಿಕ್ಷಕ ವಿ.ವಿ. ಕರಿಗಾರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net