ಸೈನಿಕರ ಸ್ಮರಣೆಯಲ್ಲಿ ಲಕ್ಷ ದೀಪೋತ್ಸವ

Deepotsav 01
Published on

ಕಲಬುರಗಿ: ದೇಶದ ಗಡಿ ರಕ್ಷಣೆಗಾಗಿ ಜೀವನವನ್ನೇ ಸವೆಸುತ್ತಿರುವ ವೀರ ಸೈನಿಕರ ಸ್ಮರಣೆಯಲ್ಲಿ ನಗರದ ಕೋಟೆ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಎದುರು ಲಕ್ಷ ದೀಪೋತ್ಸವ ಶ್ರದ್ಧೆ, ಭಕ್ತಿಯ ಮಧ್ಯೆ ನೆರವೇರಿತು.
ಭಾರತೀಯ ಯೋಧರ ತ್ಯಾಗ ಬಲಿದಾನ ಹಾಗೂ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಲಕ್ಷ ದೀಪೋತ್ಸವ ಉದ್ಘಾಟಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ ಮಾತನಾಡಿ, ನಮ್ಮ ಕುಟುಂಬ ಸುಖ, ಶಾಂತಿ, ಸುರಕ್ಷತೆಗಾಗಿ ಮನೆಯಲ್ಲಿ ದೇವರಿಗೆ ದೀಪ ಹಚ್ಚುವ ಹಾಗೆ, ಭಾರತದ ಗಡಿ ಕಾಯುವ ಸೈನಿಕ ಸುಖ, ಶಾಂತಿ, ರಕ್ಷಣೆಗಾಗಿ ಪ್ರಾರ್ಥಿಸೋಣ. ನಮ್ಮ ಮನೆಯ ಸದಸ್ಯರೊಂದಿಗೆ ಸೈನಿಕನ ಕುಟುಂಬ ಹಾಗೂ ಕುಟುಂಬದ ಸದಸ್ಯರು ಚೆನ್ನಾಗಿ ಇರಲಿ ಎಂಬುದು ಉತ್ಸವ ಆಶಯ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಗಂಗಾ, ಸುಮಂಗಲಾ ಚಕ್ರವರ್ತಿ, ನಾಗಯ್ಯ ಸ್ವಾಮಿ, ಸಾಯಿ ಆನಂದ, ಸಿದ್ಧಲಿಂಗ ಮಗ್ಗಶೆಟ್ಟಿ, ಶಿವಪುತ್ರಪ್ಪ ಹಿರೇಮಠ, ವಿಜಯ ರಾಠೋಡ, ಸಂಪತ್, ಸಿದ್ದರಾಮ, ಜಗದೀಶ ಕೊರವಿ, ಸಂಜಯ ರೇವಣಕರ, ಡಾ.ಸುಧಾ ಹಾಲಕಾಯಿ, ಸುವರ್ಣ ವಾಡೆ, ಮಾಲಾ ಕಣ್ಣಿ, ಪೂರ್ಣಿಮಾ ಹೊಸಳ್ಳಿಕರ, ಜ್ಯೋತಿ ಗುತ್ತೇದಾರ, ಇಂದಿರಾ ರಾಠೋಡ, ವಿಜಯಲಕ್ಷಿö್ಮÃ ಸಿಂಗೋಡಿ, ರೇಣುಕಾಚಾರ್ಯ ಸ್ಥಾವರಮಠ, ರಾಜು ಕೊರಳ್ಳಿ, ಶ್ರೀಶೈಲ, ಶಾಂತಪ್ಪ ಕಿಣ್ಣಿ, ಸಿದ್ದರಾಜ ಬಿರಾದಾರ, ಉದಯ ರಾಠೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net