ಸೈನಿಕರ ಮಡದಿಯರ ಸಿಂಧೂರ ಗಟ್ಟಿಯಾಗಿರಲಿ

Oplus_131072
Oplus_131072
Published on

ಯಾದಗಿರಿ: ದೇಶ ರP್ಷÀಣೆಗಾಗಿ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ವೀರ ಸೈನಿಕರ ಶ್ರಮದಿಂದ ಜಯಶಾಲಿಗಳಾಗುವುದರ ಜತೆಗೆ ಸೈನಿಕರ ಪತ್ನಿಯರ ಸಿಂಧೂರ ಸದಾ ಗಟ್ಟಿಯಾಗಿರಲಿ ಎಂದು ಹೆಡಗಿಮದ್ರಾ ಶಾಂತಶಿವಯೋಗೀಶ್ವರ ಮಠದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯಿAದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ಯ ಶನಿವಾರ ರಾತ್ರಿ ನಗರದ ಲಕ್ಷಿö್ಮÃ ದೇವಸ್ಥಾನದ ಆವರಣದಲ್ಲಿ ಭಾರತೀಯ ಸೈನಿಕರ ಮಡದಿಯರ ರP್ಷÀಣೆಗಾಗಿ ಮಾತೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ದೇಶಕಾಯುವ ವೀರಯೋಧರ ಮಡದಿಯರ ಸಿಂಧೂರ ಭಾಗ್ಯಕ್ಕೆ ಪ್ರಾರ್ಥನೆ ಸಲ್ಲಿಸುವ ಕಾರ್ಯ ಮಾಡುತ್ತಿರುವುದನ್ನು ಶ್ಲಾಘಿಸಿದರು.

ಎಷ್ಟೇ ಕಷ್ಟ ಬಂದರು ಲೌಕಿಕ ಜೀವನದಿಂದ ವಿಮುಖವಾಗದೇ ಸಂಸಾರದಲ್ಲಿದ್ದು ಶಿವನ ಸಾಕ್ಷಾತ್ಕಾರ ಪಡೆದವಳು ಹೇಮರೆಡ್ಡಿ ಮಲ್ಲಮ್ಮ. ಭಗವಂತ ಪ್ರತ್ಯP್ಷÀವಾದಾಗ ತನಗಾಗಿ ಏನನ್ನೂ ಕೇಳದೇ,ಸಮಾಜದ ಒಳಿತಿಗಾಗಿ ಪ್ರಾರ್ಥಿಸಿದ ಅವಳ ನಿಸ್ವಾರ್ಥ ಮನೋಭಾವ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ ಎಂದರು.

ಸಮಾಜ ಸೇವಕಿ ನಾಗರತ್ನ ಕುಪ್ಪಿ ಮಾತನಾಡಿ, ನೂರಾರು ಮಹಿಳೆಯರು ಸೇರಿ ಸಂಸ್ಥೆ ಕಟ್ಟಿಕೊಂಡು ಸಂಘಟಿತರಾಗುತ್ತಿರುವುದನ್ನು ಶ್ಲಾಘಿಸಿ, ಮುಂಬರುವ ದಿನಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ನಾಡಿಗೆ ಮಾದರಿಯಾಗಿ ಬೆಳೆಯಲಿ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಮಹಿಳಾ ಚಿಂತಕಿ ಡಾ.ಜ್ಯೋತಿಲತಾ ತಡಿಬಿಡಿಮಠ , ಮಹಿಳೆಯರು ಕೀಳರಿಮೆ ತೊರೆದು, ಸಂಘಟಿತರಾಗಿ ಸಮಾಜದ ಋಣ ತೀರಿಸಲು ಮುಂದೆ ಬರುತ್ತಿದ್ದಾರೆ.ಸಮಾಜದಲ್ಲಿ ನಿರ್ಲಕ್ಷÈಕ್ಕೆ ಒಳಗಾಗಿರುವ ಮಹಿಳೆಯರ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುವ ಮೂಲಕ ಇತರರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net