

ಭಾಲ್ಕಿ: ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ ಎಂದು ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ದೇವರು ನುಡಿದರು.
ಪಟ್ಟಣದ ಕನಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ನಿವೃತ್ತ ಸೈನಿಕ ಶಿವಕುಮಾರ ತೇಗಂಪುರೆ ಅವರ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ರಾಷ್ಟç ರಕ್ಷಣೆಗಾಗಿ ಸೈನಿಕರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ದೇಶದ ಸೈನಿಕರ ಸೇವೆ ಅನನ್ಯವಾದುದು. ನಿವೃತ್ತ ನಂತರ ಸ್ವಗ್ರಾಮಕ್ಕೆ ಬರುವ ಸೈನಿಕರನ್ನು ಸನ್ಮಾನಿಸುವುದರೊಂದಿಗೆ ಅವರು ಸೈನಿಕರ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುವುದರಿAದ ಇತರರಲ್ಲಿ ದೇಶಭಕ್ತಿ ಮೂಡುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಸೈನಿಕ ಶಿವಕುಮಾರ ತೇಗಂಪುರೆ ಮಾತನಾಡಿ, ಸೇವಾ ನಿವೃತ್ತಿ ಹೊಂದಿದರೂ ದೇಶ ಸೇವೆಯಿಂದ ನಿವೃತ್ತಿಯಾಗಿಲ್ಲ. ದೇಶ ರಕ್ಷಣೆಗೆ ಯಾವಾಗ ಕರೆದರೂ ಹೋಗಲು ಸಿದ್ಧ. ದೇಶ ಸೇವೆ ದೇವರ ಸೇವೆ ಇದ್ದಂತೆ. ಸೇನೆಯಲ್ಲಿ ಸಾಕಷ್ಟು ಹುದ್ದೆ ಖಾಲಿಯಿದ್ದು, ಹೆಚ್ಚಿನ ಯುವಕರು ಸೇನೆಗೆ ಸೇರಿ ದೇಶ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಕಾಶಿನಾಥ ಚಲುವಾ ಮಾತನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ, ಪುರಸಭೆ ಸದಸ್ಯ ಬಾಲಾಜಿ ಖೇಡಕರ್, ಪ್ರಮುಖರಾದ ವಿಜಯಕುಮಾರ ಶಿಂಧೆ, ಮಾಳಸ್ಕಾಂತ ವಾಘೆ, ಪಾಂಡುರಂಗ ಉಡಬಾಳ, ಗೋಪಾಲ ಹವಾಲ್ದಾರ, ಶಿವಾಜಿ ಮೇತ್ರೆ, ಸಂಜೀವಕುಮಾರ ಗುಂಜರಗೆ ಇತರರಿದ್ದರು.