ಸೈನಿಕ ಶಾಲೆಯಲ್ಲಿ ಹವಾಮಾನ ಕೇಂದ್ರ ಉದ್ಘಾಟನೆ

25Kush02
ಕೂಡಿಗೆಯ ಸೈನಿಕ ಶಾಲೆಯ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರಾದ ಏರ್ ವೈಸ್ ಮಾರ್ಷಲ್ ಪಿ.ಕೆ.ಘೋಷ್ ಅವರನ್ನು ಶಾಲೆಯ ವಿದ್ಯಾರ್ಥಿಗಳು ಸ್ವಾಗತಿಸಿದರು.
Published on

ಕುಶಾಲನಗರ: ಕೂಡಿಗೆಯ ಸೈನಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಹವಾಮಾನ ಕೇಂದ್ರವನ್ನು ಆಡಳಿತ ಮಂಡಳಿಯ ಅಧ್ಯಕ್ಷ ಏರ್ ವೈಸ್ ಮಾರ್ಷಲ್ ಪಿ.ಕೆ.ಘೋಷ್ ಶನಿವಾರ ಉದ್ಘಾಟಿಸಿದರು.

ಈ ಹವಾಮಾನ ಕೇಂದ್ರವು ಉಷ್ಣಾಂಶ ಮಾಪನ, ಮಳೆ ಮಾಪನ, ವಾಯು ದಿಕ್ಸೂಚಿ, ಸ್ಟಿವನ್ ಸನ್ ಸ್ಕ್ರೀನ್ ಮೊದಲಾದ ಆಧುನಿಕ ಉಪಕರಣಗಳನ್ನೊಳಗೊಂಡಿದ್ದು, ವಿದ್ಯಾರ್ಥಿಗಳ ಚಟುವಟಿಕೆ ಆಧಾರಿತ ಕಲಿಕೆಗೆ ಪೂರಕವಾಗಿದೆ ಘೋಷ್ ತಿಳಿಸಿದರು.

ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಂಶುಪಾಲ ಆರ್.ಆರ್.ಲಾಲ್, ಆಡಳಿತಾಧಿಕಾರಿ ಕರ್ನಲ್ ಜಿ.ಕಣ್ಣನ್, ಆಡಳಿತಾಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಪ್ರಸಾದ್, ಕೊಡಗು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ಮೈಸೂರಿನ ಸಿಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ್, ಸಹಾಯಕ ಅಭಿಯಂತರ ಎಂ.ಎಸ್.ಚಂದ್ರಶೇಖರ್, ಎಲೆಕ್ಟ್ರಿಕಲ್ ಸಹಾಯಕ ಅಭಿಯಂತರ ಟಿ.ನಾಗೇಂದ್ರ, ಕಿರಿಯ ಅಭಿಯಂತರ ಆಶಾ ರಾಮ್ ಹಾಗೂ ಪೋಷಕರ ಪ್ರತಿನಿಧಿಯಾದ ಪ್ರಕಾಶ್ ಕೃಷ್ಣಭಟ್ ಜೋಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net