ಸೈಕ್ಲಿಂಗ್ ಮಾಡುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ

ಸೈಕ್ಲಿಂಗ್ ಮಾಡುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ
Published on

ಹಾಸನ: ಸೈಕ್ಲಿಂಗ್ ಮಾಡುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಪ್ರಯೋಜನಗಳಿವೆ. ದೇಹಕ್ಕೆ ಉತ್ತಮ ವ್ಯಾಯಾಮ ಸಿಗುವುದರ ಜೊತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಎನ್.ಶಿವಸ್ವಾಮಿ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಮಂಗಳವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ದೈಹಿಕ ಮಾನಸಿಕ ಸದೃಢತೆ ಮತ್ತು ಪರಿಸರ ಸ್ನೇಹಿ ಸೈಕಲ್ ಜಾಥಾ ಅರಿವು ಕಾರ್ಯಕ್ರಮವನ್ನು ಹಸಿರು ಬಾವುಟ ಪ್ರದರ್ಶಿಸಿ ಸೈಕಲ್ ತುಣಿಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಮೃತ ಮಹೋತ್ಸವದ 75ನೇ ವರ್ಷದ ಅಂಗವಾಗಿ ಕೇಂದ್ರ ಸರ್ಕಾರದಿಂದ ಎಲ್ಲೆಡೆ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಇದು ಸ್ವಾಸ್ಥ್ಯಾ ಮನುಷ್ಯ ಮತ್ತು ಸ್ವಾಸ್ಥ್ಯಾ ಮನೆ ಘೋಷಣೆಯೊಂದಿಗೆ ಆಗಬೇಕು. ಈ ಸೈಕಲ್ ಜಾಥ ಮಾಡುವುದರಿಂದ ನಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.

ನಾವು ದಿನನಿತ್ಯ ವ್ಯಾಯಾಮ ಮಾಡುವಂತೆ ಸೈಕಲ್ ಹೊಡೆಯು ವುದರಿಂದ ಕೂಡ ಹಲವಾರು ಲಾಭ ಗಳಿವೆ. ಸೈಕಲ್ ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದರು.

ಜಿಲ್ಲಾ ಆರೋಗ್ಯ ಇಲಾಖೆಯ ಆರ್.ಸಿ.ಹೆಚ್. ಡಾ. ಚೇತನ್, ಡಾ.ಎಂ.ಹೆಚ್. ಹರೀಶ್, ಡಾ.ಶಿವಶಂಕರ್, ಡಾ.ಮಂಜುನಾಥ್, ಆರುಂಧತಿ, ಗೀತಾ, ಹಿರಿಯ ಕಲಾವಿದ ಮತ್ತು ಪ್ರಶಸ್ತಿ ವಿಜೇತ ಬಿ.ಟಿ. ಮಾನವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net