ಸೈಕಲ್ ಯಾತ್ರೆ ಸಾಹಸಿಗೆ ಸ್ವಾಗತ

25M.D.R.6
Published on

ಮದ್ದೂರು: ಪ್ರಧಾನಿ ನರೇಂದ್ರ ಮೋದಿಯವರ ಮಾಲಿನ್ಯ ಮುಕ್ತ ಭಾರತದ ಕಲ್ಪನೆಯನ್ನು ಸಾಕಾರ ಗೊಳಿಸುವ ಸಂಬಂಧ ಜನಜಾಗೃತಿಗಾಗಿ ಭಾರತದಾದ್ಯಂತ ಏಕಾಂಗಿಯಾಗಿ ಸೈಕಲ್ ಯಾತ್ರೆ ಕೈಗೊಂಡಿರುವ ಯುವ ಸಾಹಸಿಗ ಬ್ರಿಜೇಶ್ ಶರ್ಮ ಶುಕ್ರವಾರ ಮದ್ದೂರಿಗೆ ಆಗಮಿಸಿದ ಸಂದರ್ಭ ಸ್ಥಳೀಯ ರೋಟರಿ ಸಂಸ್ಥೆಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಮಧ್ಯಪ್ರದೇಶದಿಂದ ಸೈಕಲ್ ಜನ ಜಾಗೃತಿ ಯಾತ್ರೆ ಪ್ರಾರಂಭಿಸಿ 9 ರಾಜ್ಯಗಳನ್ನು ಕ್ರಮಿಸಿ (36,000 ಕಿಮೀ.)
ಕರ್ನಾಟಕವನ್ನು ಶರ್ಮ ಪ್ರವೇಶಿಸಿದ್ದಾರೆ. ಮದ್ದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net