

ಆನಂದ ಅಂಗಡಿ ಹುಬ್ಬಳ್ಳಿ
ಇಲ್ಲಿನ ನೃಪತುಂಗ ಬೆಟ್ಟದಲ್ಲಿ ಜಿಪ್ಲೈನ್ ಅಳವಡಿಸುವ ಯೋಜನೆಗೆ ವೇಗ ದೊರೆತಿರುವ ಮಧ್ಯೆಯೇ ಕಾರವಾರ ರಸ್ತೆಯ ಕೆಂಪಗೇರಿ ಕೆರೆಯ ಆವರಣದಲ್ಲಿ ಮತ್ತೊಂದು ಜಿಪ್ಲೈನ್ ಹಾಗೂ ಸ್ಕೆ ೖ ಸೈಕ್ಲಿಂಗ್ ಅಳವಡಿಸುವ ಯೋಜನೆ ಸಿದ್ಧಗೊಂಡಿರುವುದು ಈ ಭಾಗದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಂತಾಗಿದೆ.
ಸುಮಾರು 14 ಎಕರೆ ವ್ಯಾಪಿಸಿರುವ ಕೆಂಪಕೇರಿ ಕೆರೆ ಆವರಣದಲ್ಲಿ ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಸುಮಾರು 5 ಕೋಟಿ ರೂ. ಅನುದಾನದಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೆರೆಯ ಆವರಣದಲ್ಲಿ ಕೃತಕ ನಡುಗಡ್ಡೆ, ಕೆರೆ ಸುತ್ತಲೂ ಪಾದಚಾರಿ ಮಾರ್ಗ, ಉದ್ಯಾನ, ಶೌಚಾಲಯ, ಫುಡ್ಕೋರ್ಟ್, ವೀಕ್ಷಣಾ ಗೋಪುರ ಸೇರಿ ಹಲವಾರು ಸೌಲಭ್ಯಗಳು ನಿರ್ವಣಗೊಂಡಿವೆ.
ಈ ಮಧ್ಯೆ ಶಾಸಕ ಪ್ರಸಾದ ಅಬ್ಬಯ್ಯ ಸೂಚನೆ ಮೇರೆಗೆ ಕೆರೆ ಆವರಣದಲ್ಲಿ ಜಿಪ್ಲೈನ್ ಹಾಗೂ ಸ್ಕೈ ಸೈಕ್ಲಿಂಗ್ ಅಳವಡಿಸಲು ಮಹಾನಗರ ಪಾಲಿಕೆ ಪ್ರಸ್ತಾವನೆ ಸಿದ್ಧಪಡಿಸಿ, ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದೆ.
ಈ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯು 1 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಈಗಾಗಲೇ ಪುಣೆಯ ಖಾಸಗಿ ಸಂಸ್ಥೆಯೊಂದು ಕೆರೆಯ ಆವರಣದಲ್ಲಿ ಜಿಪ್ಲೈನ್ ಹಾಗೂ ಸ್ಕೈ ಸೈಕ್ಲಿಂಗ್ ಅಳವಡಿಕೆಗೆ ಅಧ್ಯಯನವನ್ನೂ ನಡೆಸಿದ್ದು, ಎರಡೂ ಸೌಲಭ್ಯಗಳ ಅಳವಡಿಕೆಗೆ ಕೆರೆ ಆವರಣ ಸೂಕ್ತವಾಗಿರುವುದಾಗಿ ಸಂಸ್ಥೆ ವರದಿಯನ್ನೂ ನೀಡಿದೆ.
ನೃಪತುಂಗ ಬೆಟ್ಟದಲ್ಲಿ ಜಿಪ್ಲೈನ್ ಬೆಟ್ಟದಿಂದ ಮರಗಳ ಮಧ್ಯದಲ್ಲಿ ಕೆಳಗೆ ಇಳಿಯಲಿದೆ. ಅಲ್ಲಿ ಜಿಪ್ಲೈನ್ ನಿರ್ವಣಕ್ಕೆ ನೈಸರ್ಗಿಕ ಸೌಲಭ್ಯವಿದೆ. ಆದರೆ, ಕೆಂಪಗೇರಿ ಕೆರೆಯಲ್ಲಿ ಜಿಪ್ಲೈನ್ ಹಾಗೂ ಸ್ಕೈ ಸೈಕ್ಲಿಂಗ್ಗಾಗಿ ಪ್ರತ್ಯೇಕ ಸ್ಟಾ್ಯಂಡ್ಗಳನ್ನು ನಿಲ್ಲಿಸಲು ತೀರ್ವನಿಸಲಾಗಿದೆ.
ನೃಪತುಂಗ ಬೆಟ್ಟದ ಜಿಪ್ಲೈನ್ 400 ಮೀಟರ್ ಉದ್ದ ಇದ್ದರೆ, ಕೆಂಪಗೇರಿ ಕೆರೆಯದ್ದು 800 ಮೀಟರ್ಗಿಂತಲೂ ಹೆಚ್ಚು ಉದ್ದ ಇರಲಿದೆ. ಕೆರೆ ಆವರಣದ ಪ್ರವೇಶ ದ್ವಾರದ ಎದುರು 25 ಅಡಿ ಎತ್ತರದ ಸ್ಟಾ್ಯಂಡ್ ನಿಲ್ಲಿಸಿ, ಇಳಿಜಾರಿನಲ್ಲಿ ಸ್ಟೀಲ್ ತಂತಿಗಳನ್ನು ಅಳವಡಿಸುವ ಯೋಜನೆ ಇದೆ. ಜಿಪ್ಲೈನ್ ಕೊನೆಯ ಭಾಗದಲ್ಲಿ ಸುಮಾರು 10 ಅಡಿ ಎತ್ತರದಲ್ಲಿ ಸ್ಟಾ್ಯಂಡ್ ಅಳವಡಿಸುವ ಯೋಜನೆ ಮಹಾನಗರ ಪಾಲಿಕೆಯದ್ದು.
ಎರಡೂ ಸೌಲಭ್ಯ ಒಂದೆಡೆ: ಕೆಂಪಗೇರಿ ಕೆರೆಯ ಆವರಣದಲ್ಲಿ 2 ಮಾರ್ಗದಲ್ಲಿ ಜಿಪ್ಲೈನ್ ಹಾಗೂ ಸ್ಕೈ ಸೈಕ್ಲಿಂಗ್ ನಿರ್ವಣಗೊಳ್ಳಲಿವೆ. ಈ ಭಾಗದಲ್ಲಿ ಈ ಎರಡೂ ಸೌಲಭ್ಯಗಳು ಇರುವ ತಾಣಗಳು ಎಲ್ಲಿಯೂ ಇಲ್ಲ. ಹಾಗಾಗಿ, ಕೆಂಪಗೇರಿ ಕೆರೆ ಮುಂದಿನ ದಿನಗಳಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಲಿದೆ.
ಕರ್ನಾಟಕದಲ್ಲಿ ಮೊದಲು: ಕರ್ನಾಟಕದಲ್ಲಿ ಬಹುತೇಕ ಯಾವ ಪ್ರದೇಶದಲ್ಲಿಯೂ ಸ್ಕೈ ಸೈಕ್ಲಿಂಗ್ ಸೌಲಭ್ಯ ಇಲ್ಲ. ಕುಲು ಮನಾಲಿ, ಋಷಿಕೇಶ ಹಾಗೂ ಕೊಚಿಯಲ್ಲಿ ಸ್ಕೈ ಸೈಕ್ಲಿಂಗ್ ಪ್ರಸಿದ್ಧಿ ಪಡೆದಿದೆ. ನೆಲದಿಂದ 25 ಅಡಿ ಎತ್ತರದಲ್ಲಿ ಜೋತಾಡುವ ತಂತಿಯ ಮೇಲೆ ಸೈಕಲ್ ತುಳಿಯುವ ಮಜವೇ ಬೇರೆ. ಈ ಸಾಹಸಮಯ ಮೋಜು ಹುಬ್ಬಳ್ಳಿ ಹಾಗೂ ಸುತ್ತಲಿನ ಜನರಿಗೆ ಶೀಘ್ರ ದೊರೆಯಲಿದೆ.
ಕೆಂಪಗೇರಿ ಕೆರೆಯ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕ ಪ್ರಸಾದ ಅಬ್ಬಯ್ಯ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಇಲಾಖೆ ಶೀಘ್ರ ಅನುದಾನ ಬಿಡುಗಡೆಗೊಳಿಸುವ ವಿಶ್ವಾಸ ಇದೆ.- ಡಾ. ಸುರೇಶ ಇಟ್ನಾಳ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ
ಕೆಂಪಗೇರಿ ಕೆರೆ ಅಭಿವೃದ್ಧಿಗೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಜಿಪ್ಲೈನ್ ಹಾಗೂ ಸ್ಕೈ ಸೈಕಲಿಂಗ್ ಅಳವಡಿಕೆಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಲಾಗುತ್ತಿದೆ.- ಪ್ರಸಾದ ಅಬ್ಬಯ್ಯ, ಶಾಸಕ