ಸೇವೆಯಿಂದ ಮನುಷ್ಯನ ಬದುಕು ಸಾರ್ಥಕ

2 ckm 1
ಚಿಕ್ಕಮಗಳೂರಿನ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ರೋಟರಿ ಕಾಫಿ ಲ್ಯಾಂಡ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ರೋಟರಿ ಕ್ಲಬ್ ನಿಯೋಜಿತ ಜಿಲ್ಲಾ ರಾಜ್ಯಪಾಲ ವಸಂತ್ ಹೋಬಳಿದಾರ್ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಸೇವೆಯಿಂದ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ರೋಟರಿ ಕ್ಲಬ್ ನಿಯೋಜಿತ ಜಿಲ್ಲಾ ರಾಜ್ಯಪಾಲ ವಸಂತ್ ಹೋಬಳಿದಾರ್ ತಿಳಿಸಿದರು.

ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ರೋಟರಿ ಕಾಫಿ ಲ್ಯಾಂಡ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಣ, ಅಧಿಕಾರ, ಆಸ್ತಿ, ಅಂತಸ್ತು, ಯಾವುದೂ ಶಾಶ್ವತವಲ್ಲ, ಅವುಗಳಿಂದ ಮಾನಸಿಕ ಶಾಂತಿ, ನೆಮ್ಮದಿ, ತೃಪ್ತಿ ದೊರೆಯುವುದಿಲ್ಲ, ಸೇವಾ ಕಾರ್ಯಗಳಿಂದ ಅವೆಲ್ಲವೂ ನಮಗೆ ಲಭಿಸುತ್ತವೆ. ಜೊತೆಗೆ ನಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ ಎಂದರು.

ಸAಘ ಸಂಸ್ಥೆಗಳ ಮೂಲ ಉz್ದೆÃಶವೇ ಸಮಾಜ ಸೇವೆ. ಅವುಗಳು ಹುಟ್ಟಿರುವುದೇ ಸಾಮಾಜಿಕ ಸೇವೆಗಾಗಿ. ಹಾಗಾಗಿ ಸಂಘ ಸಂಸ್ಥೆಗಳು ಮನುಕುಲದ ಸೇವೆಗಾಗಿ ದುಡಿಯಬೇಕು ಎಂದು ಕಿವಿಮಾತು ಹೇಳಿದರು.

ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜ ಸೇವೆಯನ್ನು ತಮ್ಮ ಕರ್ತವ್ಯವೆಂದು ಪರಿಗಣಿಸಬೇಕು. ನೂತನ ಪದಾಧಿಕಾರಿಗಳು ಸಂಸ್ಥೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಸಹಾಯಕ ವಲಯ ರಾಜ್ಯಪಾಲ ಟಿ. ಎಂ.ಪ್ರವೀಣ್ ನಹರ್ ಮಾತನಾಡಿ, ಕಾಫಿ ಲ್ಯಾಂಡ್ ಪದಾಧಿಕಾರಿಗಳು ಮತ್ತು ಸದಸ್ಯರು ಸಾಮಾಜಿಕ ಸೇವೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ನಾಗೇಶ್ ಕೆಂಜಿಗೆ ನೇತೃತ್ವದ ನೂತನ ಪದಾಧಿಕಾರಿಗಳಿಗೆ ನಿಯೋಜಿತ ಜಿಲ್ಲಾ ರಾಜ್ಯಪಾಲ ವಸಂತ್ ಹೋಬಳಿದಾರ್ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳು ಮತ್ತು ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ನೂತನ ಅಧ್ಯಕ್ಷ ನಾಗೇಶ್ ಕೆಂಜಿಗೆ ಮಾತನಾಡಿ, ತಮ್ಮ ಅವಧಿಯಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ವಿವರ ನೀಡುವುದರ ಜೊತೆಗೆ ಅವುಗಳ ಯಶಸ್ಸಿಗೆ ಸಹಕರಿಸುವಂತೆ ಸದಸ್ಯರಿಗೆ ಮನವಿ ಮಾಡಿದರು. ಅಧ್ಯಕ್ಷ ಪದವಿಯನ್ನು ಸಮಾಜ ಸೇವೆಗೆ ದೊರೆತ ಅವಕಾಶವೆಂದು ಭಾವಿಸಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ನಿರ್ಗಮಿತ ಅಧ್ಯಕ್ಷ ಪಿ. ತನೋಜ್ ಕುಮಾರ್ ಮಾತನಾಡಿ, ತಮ್ಮ ಎರಡು ವರ್ಷಗಳ ಅವಧಿಯಲ್ಲಿ ನಡೆಸಲಾದ ಕಾರ್ಯಕ್ರಮಗಳನ್ನು ವಿವರಿಸಿ ಅವುಗಳ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ನಿರ್ಗಮಿತ ಅಧ್ಯಕ್ಷ ಪಿ. ತನೋಜ್ ಕುಮಾರ್ ದಂಪತಿಯನ್ನು ಇದೇ ವೇಳೆ ಸನ್ಮಾನಿಸಲಾಯಿತು. ಜೊತೆಗೆ ರೋಟರಿ ಕಾಫಿ ಲ್ಯಾಂಡ್ ನ ಬೆಳ್ಳಿ ಹಬ್ಬದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ಹೊರ ತಂದ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಲಯ ಸೇನಾನಿ ಎಚ್.ಕೆ. ಮಂಜುನಾಥ, ಕಾರ್ಯದರ್ಶಿ ಎಂ.ಆನAದ್, ಉಪಾಧ್ಯಕ್ಷ ಶಾಂತರಾಮ್ ಶೆಟ್ಟಿ, ಖಜಾಂಚಿ ಎಂ.ವಿ.ದಯಾನAದ್, ಸಹಕಾರ್ಯದರ್ಶಿ ಡಾ ಜಿ. ಆರ್.ವೀರೇಂದ್ರ, ಪದಾಧಿಕಾರಿಗಳಾದ ಬಿ.ಕೆ. ಗುರುಮೂರ್ತಿ, ಎಚ್.ಆರ್. ಗುರುಪ್ರಸಾದ್, ರವೀಂದ್ರನಾಥ್ ನಾಯ್ಡು, ರುದ್ರೇಶ್ ಬಿ. ಕಡೂರ್, ಪಾರ್ವತಮ್ಮ, ಎಚ್.ಡಿ.ಸುಧಾ ಗೌಡ, ವಿನಯ್ ಎನ್ ಕುಮಾರ್, ಬಿ. ಸಿ. ವಿವೇಕ್, ಹೇಮಂತ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net