ಸೇವೆಯಿಂದ ಜನಮನದಲ್ಲಿ ಉಳಿಯುವುದು ಮುಖ್ಯ

9
Published on

ದೇವನಹಳ್ಳಿ: ಇತ್ತೀಚೆಗಷ್ಟೇ ಹೃದಾಯಾಘತದಿಂದ ಮೃತಪಟ್ಟ ಮಾನವಹಕ್ಕುಗಳ ಜಿಲ್ಲಾ ಅಧ್ಯಕ್ಷರೂ ಆದ ಪ್ರೊ ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಸಿರುಸೇನೆ ಜಿಲ್ಲಾ ಉಪಾಧ್ಯಕ್ಷ ಅಣ್ಣೇಶ್ವರ ಗ್ರಾಮದ ಎ.ಎಂ. ನಾರಾಯಣಸ್ವಾಮಿ(ನಾಣಿ)ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾನವಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ ಸಿಂಗ್ ಅಧ್ಯಕ್ಷತೆಯಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ಖಚಿತ. ಆದರೆ ಸಮಾಜ ಸೇವೆ ಮೂಲಕ ಜನಮನದಲ್ಲಿ ಉಳಿಯುವಂತಾಗಬೇಕಿದೆ ಎಂದರು. ರೈತ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಬಿ.ಕೆ,ವಿನೋದಕುಮರಗೌಡ ಮಾತನಾಡಿ, ಎ.ಎಂ. ನಾರಾಯಣಸ್ವಾಮಿ ಅವರು ಹೊಸ ಹೋರಾಟ, ರೈತರ ಸಮಸ್ಯೆಗಳ ಬಗ್ಗೆಯೇ ಚರ್ಚಿಸುತ್ತಿದ್ದರು. ಯಾವುದೇ ಹಮ್ಮುಬಿಮ್ಮು ಇಲ್ಲದೆ ಜನಸೇವಕನಂತೆ ಎಲ್ಲರಲ್ಲಿ ಒಬ್ಬನಾಗಿ ಇರುತ್ತಿದ್ದರು ಎಂದು ಕಂಬನಿ ಮಿಡಿದರು. ಬೆಂಗಳೂರು ಜಿಲ್ಲಾ ಪೂರ್ವ ತಾಲುಕಿನ ಅಧ್ಯಕ್ಷ ಆನಂದಬಾಬು, ನಾಣಿ ಅವರ ಪತ್ನಿ ರತ್ನಮ್ಮ, ದಿವ್ಯಜ್ಯೋತಿ ಸೊಸೈಟಿ ಅಧ್ಯಕ್ಷ ಆರ್. ವೆಂಕಟರಾಜು, ಮಾನವಹಕ್ಕುಗಳ ಜಾಗೃತಿ ಸಮಿತಿಯ ದೇವನಹಳ್ಳಿ ತಾಲೂಕು ಮಹಿಳಾ ಅಧ್ಯಕ್ಷೆ ಲಕ್ಷ್ಮೀ, ತಾಲೂಕು ಗೌರವಾಧ್ಯಕ್ಷ ಎ. ವೆಂಕಟೇಶ್, ಹೊಸಕೋಟೆ ತಾಲೂಕು ಅಧ್ಯಕ್ಷ ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net