ಸೇವೆಯಿಂದ ಗ್ರಾಮ ಕಾಯಕ ಮಿತ್ರ ವಜಾ

ctd-----
Published on

ಚಿತ್ರದುರ್ಗ: ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಚಳ್ಳಕೆರೆ ತಾಲೂಕು ಎನ್. ಮಹದೇವಪುರ ಗ್ರಾಪಂ ಗ್ರಾಮ ಕಾಯಕ ಮಿತ್ರರಾಗಿ ಕೆಲಸ ನಿ ರ್ವಹಿಸುತ್ತಿದ್ದ ಜಿ.ಟಿ. ಭವ್ಯಾ ಅವರನ್ನು ಸೇವೆಯಿಂದ ವಜಾಗೊಳಿಸಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.

ನರೇಗಾ ಕಡತಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ ಎಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಭವ್ಯ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಬೇರೊಬ್ಬರ ನೇಮಕಕ್ಕೆ ಗ್ರಾಪಂ ಪಿಡಿಒ ಕೋರಿದ್ದರು ಎಂದು ಸಿಇಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net