ಸೇವೆಯ ಜತೆಗೆ ಸಂಘಟನೆಗೂ ಒತ್ತು, ಬಿಜೆಪಿ ಮಂಡಲಾಧ್ಯಕ್ಷ ಪ್ರತಾಪ್ ಕರೆ, ಬಾಗೇಪಲ್ಲಿ ಶಕ್ತಿಕೇಂದ್ರ ಉದ್ಘಾಟನೆ

16 bgp news photo
Published on

ಬಾಗೇಪಲ್ಲಿ: ಕರೊನಾ ಸಂಕಷ್ಠಕ್ಕೆ ಸಿಲುಕಿರುವ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವಾ ಕಾರ್ಯದ ಜತೆಯಲ್ಲೇ ಪಕ್ಷ ಸಂಘಟನೆಗೂ ಹೆಚ್ಚಿನ ಒತ್ತು ನೀಡಬೇಕೆಂದು ಬಿಜೆಪಿ ಕಾರ್ಯಕರ್ತರಿಗೆ ಮಂಡಲಾಧ್ಯಕ್ಷ ಆರ್.ಪ್ರತಾಪ್ ಕರೆ ನೀಡಿದರು.

ತಾಲೂಕಿನ ಜಿ.ಮದ್ದೇಪಲ್ಲಿ ಕ್ರಾಸ್‌ನಲ್ಲಿ ಶುಕ್ರವಾರ ಬಿಜೆಪಿ ಶಕ್ತಿಕೇಂದ್ರದ ಕಚೇರಿ ಉದ್ಘಾಟಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೂ ತಿಳಿಸುವ ಹಾಗೂ ಕರೊನಾ ಲಸಿಕೆ ಬಗ್ಗೆ ಹರಡಿರುವ ಆರೋಪಗಳಿಗೆ ಕೆಲಸದ ಮೂಲಕ ಉತ್ತರ ನೀಡಬೇಕಿದೆ ಎಂದರು.

ಕ್ಷೇತ್ರದ ಪ್ರತಿ ಗ್ರಾಮಕ್ಕೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕೇವಲ ಪ್ರಚಾರಕ್ಕಾಗಿ ಸೇವೆ ಮಾಡದೆ ಸಂಘಟನೆಯ ಭಾಗವಾಗಿ ಈ ಕಾರ್ಯ ನಡೆಯುತ್ತಿದೆ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಐದು ಬಾರಿ ಗೆದ್ದಿರುವ ಸಂಸದರಿಗೂ ಹಾಗೆಯೇ ಪ್ರಥಮ ಬಾರಿಗೆ ಸಂಸದರಾಗಿರುವವರಿಗೂ ಸಚಿವ ಸ್ಥಾನ ಕೊಟ್ಟು ಜವಾಬ್ದಾರಿ ನೀಡಿದೆ ಎಂದು ಹೊರವರ್ತುಲ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ.ಮುನಿರಾಜು ಹೇಳಿದರು.

ಸವಿತಾ ಸಮಾಜ, ಕಾರು ಚಾಲಕರ ಸಂಘ ಹಾಗೂ ಹಮಾಲಿ ಸಂಘದ ಸದಸ್ಯರಿಗೆ ಸಿ.ಮುನಿರಾಜು ದಿನಸಿಕಿಟ್ ವಿತರಿಸಿದರು. ಎಪಿಎಂಸಿ ಅಧ್ಯಕ್ಷ ಸೋಮಶೇಖರರೆಡ್ಡಿ, ಗ್ರಾಪಂ ಸದಸ್ಯರಾದ ಅಂಜಿನಪ್ಪ, ರಫೀಕ್, ಎಂ.ಆರ್.ವೆಂಕಟರವಣಪ್ಪ, ಚನ್ನಕೃಷ್ಣಪ್ಪ, ನಾಗಭೂಷಣ, ಶಕ್ತಿಕೇಂದ್ರ ಅಧ್ಯಕ್ಷ ಎಸ್.ವಿ.ವೆಂಕಟರವಣ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ, ಪ್ರಭಾಕರರೆಡ್ಡಿ ಇತರರಿದ್ದರು.

ಬಿಜೆಪಿ ಬಯಸಿ ಟಿಕೆಟ್ ನೀಡಿ ಅವಕಾಶ ಕೊಟ್ಟರೆ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ, ಇಲ್ಲವಾದಲ್ಲಿ ಪಕ್ಷ ಬಯಸಿದವರ ಬೆಂಬಲಕ್ಕೆ ನಿಂತು ಬಿಜೆಪಿ ಗೆಲ್ಲಿಸುತ್ತೇನೆ. ಸಿ.ಮುನಿರಾಜು, ಹೊರವರ್ತುಲ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net