

ಚಿತ್ರದುರ್ಗ: ಸಹನೆ,ಸಹಕಾರ,ತ್ಯಾಗದ ಮೂಲಕ ಒತ್ತಡದ ಜೀವನದಿಂದ ಹೊರ ಬರಲು ಸಾಧ್ಯವಿದೆ ಎಂದು ಆರ್ಥಿಕ ಚಿಂತಕ ಡಾ.ಜಿ.ಎನ್.ಮ ಲ್ಲಿಕಾರ್ಜುನಪ್ಪ ತಿಳಿಸಿದರು. ರಾಜ್ಯಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಸಮಾ ರಂಭದಲ್ಲಿ ಮಾತನಾಡಿ,ಸರ್ಕಾರಿ ನೌಕರರು ಕೆಲಸದಿಂದ ನಿವೃತ್ತರಾಗಿರಬಹುದು. ಆದರೆ ಪ್ರವತ್ತಿಯಿಂದ ಅಲ್ಲ. ಪ್ರತಿಭಾನ್ವಿತರನ್ನು ಗೌರವಿ ಸುವುದರಿಂದ ಅವರನ್ನು ಇನ್ನಷ್ಟು ಪ್ರೋತ್ಸಾಹಿಸದಂತಾಗುತ್ತದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರೇಮನಾಥ್ ಮಾತನಾಡಿ,ಸಂಘದ ಬೆಳವಣಿಗೆಯ ಹಿಂದೆ ನಿವೃತ್ತ ನೌಕರರ ಸಹಕಾರವಿದೆ. ದೇಣಿಗೆಯಿ ಂದ ಕಟ್ಟಡ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ನಿತ್ಯವೂ ಹತ್ತು ಪೌರ ಕಾರ್ಮಿಕರನ್ನು ಗೌರವಿಸಲಾಗುವುದು ಎಂದರು. ಪಪೂ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ ತಿಮ್ಮಯ್ಯ ಮಾತನಾಡಿ,ಈ ಜಿಲ್ಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪ ರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಜಾಸ್ತಿಯಿರುವ ಜಿಲ್ಲೆಯಲ್ಲಿ ಫಲಿತಾಂಶ ಕುಂಠಿತವಾಗಿದೆ.
ನಿವೃತ್ತ ನೌಕರರ ಮಾರ್ಗದರ್ಶನ ಬೇಕೆಂದರು. ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ರಂಗಪ್ಪರೆಡ್ಡಿ,ಕಾರ್ಯಾಧ್ಯಕ್ಷ ಎಂ.ಶಿವಾನಂದಪ್ಪ, ಗೌರವಾಧ್ಯಕ್ಷ ವೈ.ಚಂದ್ರಶೇಖರಯ್ಯ,ಉಪಾಧ್ಯಕ್ಷರಾದ ಮಂಜುನಾಥ್,ಎಫ್.ಆರ್.ಅಲಗೇರಿ,ಪ್ರಧಾನ ಕಾರ‌್ಯದರ್ಶಿ ತಿಮ್ಮಪ್ಪ, ಖಜಾಂಚಿ ಎನ್.ಆರ್.ಬೈಯಣ್ಣ ಇದ್ದರು.ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.