ಸೇವೆ ಸ್ಥಗಿತಗೊಳಿಸಿ ಆಕ್ರೋಶ

23-Kalaghatagi 1
Published on

ಕಲಘಟಗಿ: ಬೇಡಿಕೆ ಈಡೇರಿಸದ ಸರ್ಕಾರದ ಕ್ರಮ ಖಂಡಿಸಿ ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ಎಲ್ಲ ಗುತ್ತಿಗೆ ಆಯುಷ್ ವೈದ್ಯರು ಸೇವೆ ಸ್ಥಗಿತಗೊಳಿಸಿ ಹಿರಿಯ ವೈದ್ಯ ಡಾ. ಬಸವರಾಜ ಬಾಸೂರ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಅರ್ಪಿಸಿದರು.

ಆಯುಷ್ ಫೆಡರೇಷನ್ ಆಫ್ ಇಂಡಿಯಾ ಕರೆಯ ಮೇರೆಗೆ ತಾಲೂಕಿನಾದ್ಯಂತ ಇದುವರೆಗೂ ಸಲ್ಲಿಸುತ್ತಿರುವ ಸೇವೆಯನ್ನು ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ. ರಾಜ್ಯದ ಎನ್​ಆರ್​ಎಚ್​ಎಂ /ಎನ್​ಎಚ್​ಎಂ/ ಆರ್​ಬಿಎಸ್​ಕೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಇಲಾಖೆ ಹಿರಿಯ ಅಧಿಕಾರಿಗಳು, ಸರ್ಕಾರವನ್ನು ಅನೇಕ ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಕರೊನಾ ಹಿನ್ನೆಲೆಯಲ್ಲಿ ತಾಲೂಕಿನ ಜನರ ಆರೋಗ್ಯ ಕಾಪಾಡಲು ಮೇ 5ರಿಂದ ತೋಳಿಗೆ ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸಿ ಮಾನವೀಯತೆ ಮೆರೆದಿದ್ದೇವೆ ಎಂಬ ಆತ್ಮಾಭಿಮಾನ ನಮ್ಮಲ್ಲಿದೆ. ಆದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ಸೇವೆ ಸ್ಥಗಿತಗೊಳಿಸಿದ್ದೇವೆ. ನಾವು ಬದುಕಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರು ಆಗ್ರಹಿಸಿದರು.

ವೈದ್ಯರಾದ ಡಾ. ಸುರೇಶ ಕಳಸಣ್ಣವರ, ಡಾ. ಪ್ರಕಾಶ ಅಂಗಡಿ, ಡಾ. ಸುನೀತಾ ಕಂಚಿನಕೋಟೆ, ಡಾ. ಆರ್.ಎಂ. ಸತ್ಯನಾರಾಯಣ, ಡಾ. ವಿಶ್ವನಾಥ ಕರ್ಲವಾಡ, ಡಾ. ನಿರ್ಮಲಾ ಕಿತ್ತೂರ, ಡಾ. ಶ್ವೇತಾ ಅಮದಾಪು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net