

ಸೋಮವಾರಪೇಟೆ: ಸಮಾಜಕ್ಕೆ ವಿಶೇಷ ಸೇವೆ ಮಾಡುವವರು ಸಂಘಟಿತರಾಗಬೇಕು ಎಂದು ಇನ್ನರ್‌ವ್ಹೀಲ್ ಸಂಸ್ಥೆ ನಿಕಟಪೂರ್ವ ಜಿಲ್ಲಾ ಪ್ರಾಂತಪಾಲೆ ಡಾ. ಸಾರಿಕಾ ಪ್ರಸಾದ್ ಹೇಳಿದರು.
ಸೋಮವಾರಪೇಟೆ ಸಾಕ್ಷಿ ಸಭಾಂಗಣದಲ್ಲಿ ಭಾನುವಾರ ಇನ್ನರ್‌ವ್ಹೀಲ್ ಗೋಲ್ಡ್ ಸಂಸ್ಥೆ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ ಮಾತನಾಡಿ, ಮಹಿಳೆಯರ ಸಂಘಟನೆ, ಸೇವಾ ಮನೋಭಾವ, ಪ್ರತಿಭಾ ವಿಕಸನಕ್ಕೆ ಸಂಸ್ಥೆ ಸೂಕ್ತ ವೇದಿಕೆ ಕಲ್ಪಿಸಿದೆ. ಮುಂಬರುವ ದಿನಗಳಲ್ಲಿ ರಕ್ತದಾನ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಪದಾಧಿಕಾರಿಗಳಾದ ಉಮಾ ಮಹೇಶ್, ಪ್ರೇಮ ಹೃಷಿಕೇಶ್, ಸಂಗೀತಾ ದಿನೇಶ್, ನಂದಿನಿ ಗೋಪಾಲ್, ಅಮೃತಾ ಕಿರಣ್, ಸುವಿನಾ ಕೃಪಾಲ್, ಕವಿತಾ, ಜ್ಞಾನೇಶ್ವರಿ, ಚಿತ್ರಾ ಭೋಜರಾಜ್, ರಾಣಿ ಶ್ಯಾಮ್ ಇತರರು ಇದ್ದರು.