

ಕಲಬುರಗಿ: ಸೇವೆ ಕಾಯಂಗೊಳಿಸಿ ಶಾಸನಾತ್ಮಕ ಸೌಲಭ್ಯ ಕಲ್ಪಿಸುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಕ್ವಾರಂಟೈನಲ್ಲಿ ಇದ್ದವರಿಗೆ ಅಡುಗೆ ಮಾಡಿ ಕೊಟ್ಟವರಿಗೆ ಏಪ್ರಿಲ್ನಿಂದ ಜುಲೈವರೆಗೆ ವೇತನ ನೀಡಬೇಕು. ಏಪ್ರಿಲ್ನಿಂದ ಶಾಲೆ ಆರಂಭವಾಗುವವರೆಗೂ ವೇತನ ಕೊಡಬೇಕು. ಜನವರಿಯಿಂದ ಮಾರ್ಚ್ವರೆಗೆ ಸಾದಿಲ್ವಾರು ವೆಚ್ಚ ಪಾವತಿಸಬೇಕು. ಐಎಲ್ಸಿ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ರೇಖಾ ಸುತಾರ, ಗೌರವಾಧ್ಯಕ್ಷೆ ಗೌರಮ್ಮ ಪಾಟೀಲ್, ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ, ಗುರುದೇವಿ ಯ್ಲಾಪುರ, ಶರಣಮ್ಮ ಮಳಗಿ ಇತರರು ಪಾಲ್ಗೊಂಡಿದ್ದರು.