ಸೇವಾಭಾವ ಕೊರತೆಯಿಂದ ಅನಗತ್ಯ ಗೊಂದಲ: ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್

mysore
Published on

ಮೈಸೂರು: ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವನೆ ಇರುವ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಸಂಘ ಸಂಸ್ಥೆಗಳಲ್ಲಿ ಅನವಶ್ಯಕವಾಗಿ ಗೊಂದಲಗಳಾಗುತ್ತಿವೆ ಎಂದು ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು.

ಸರಸ್ವತಿಪುರಂನ ಶ್ರೀಯೋಗಿ ನಾರೇಯಣ ಬಣಜಿಗ( ಬಲಿಜ) ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯರು ಶಿಕ್ಷಣದ ಉದ್ದೇಶದಿಂದ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ ವಸತಿ ಸೌಲಭ್ಯ ನೀಡಿ ನಿಸ್ವಾರ್ಥ ಸೇವೆ ಮಾಡುತ್ತಿದ್ದರು. ಇಂದಿನ ಪರಿಸ್ಥಿತಿಯು ವಿಭಿನ್ನವಾಗಿದೆ. ಸಣ್ಣ ವಿಷಯಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದರ ಮೂಲಕ ಸಂಘ ಸಂಸ್ಥೆಗಳ ಏಳಿಗೆ ಕುಂಠಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘ- ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವಾಗ ವಿಶಾಲ ಮನೋಭಾವ ಬೆಳೆಸಿಕೊಂಡು ಬಡ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ. ಆಗ ಸಂಘ ಸಂಸ್ಥೆಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಮಾಜಿ ಸಚಿವ ಡಾ. ಎಂ.ಆರ್. ಸೀತಾರಾಮ್ ಅವರು ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಸಂಪೂರ್ಣ ಆರ್ಥಿಕ ಸಹಾಯ ನೀಡಿ ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಸಹಕರಿಸಿರುವುದನ್ನು ಶ್ಲಾಘಿಸಿದರು.

1953ರಲ್ಲಿ ಸ್ಥಾಪಿತವಾದ ಪುರುಷರ ವಿದ್ಯಾರ್ಥಿ ನಿಲಯ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿ ಬದುಕು ಸಾಗಿಸಲು ಸಾಧ್ಯವಾಗಿದೆ. ಆದರೆ ಬಹಳ ಹಳೆಯದಾದ ಕಟ್ಟಡವು ಶಿಥಿಲವಾಗಿದ್ದು, ಶೀಘ್ರವೇ ಕಾರ್ಯಕಾರಿ ಮಂಡಳಿಯ ಸದಸ್ಯರು ಸೀತಾರಾಮ್ ಅವರನ್ನು ಭೇಟಿ ಮಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಲಾಗುವುದು ಎಂದರು.

ಸಂಘದ ಅಧ್ಯಕ್ಷ ಎಂ.ನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಅಶಿಸ್ತಿನ ವರ್ತನೆಯನ್ನು ತೋರಬಾರದು. ಹಿರಿಯರ ಶ್ರಮವನ್ನು ನೆನೆದು ಗೌರವಿಸುವ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದರು

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘದ ಉಪಾಧ್ಯಕ್ಷ ಜಿ.ರಮೇಶ್, ಖಜಾಂಚಿ ಕೆ.ಚಂದ್ರಶೇಖರ್, ಸಹ ಕಾರ್ಯದರ್ಶಿ ಚೆಲುವರಾಜ್, ಲೆಕ್ಕ ಪರಿಶೋಧಕ ಡಿ.ನಾಗರಾಜ್, ನಿವೃತ್ತ ಪ್ರಾಂಶುಪಾಲ ಎನ್.ವಿಜಯಕುಮಾರ್, ಸಂಘದ ನಿರ್ದೇಶಕರಾದ ಗೋವಿಂದರಾಜ್, ಎಚ್.ಕೆ.ಜಗನ್ನಾಥ್, ಕೆ.ಸಿ.ಪ್ರಕಾಶ್, ಎಚ್.ವಿ.ನಾಗರಾಜ, ಕೆ.ಎನ್. ವಿಜಯಕೊಪ್ಪ, ಡಾ.ಟಿ.ರಮೇಶ ಡಾ.ಎಸ್.ಕೃಷ್ಣಪ್ಪ, ಬಿ.ಕೆ.ಸುರೇಶ್, ಗೋಪಾಲಕೃಷ್ಣ ಕುರಟ್ಟಿ ಹೊಸೂರು, ಕೆ.ಜನಾರ್ದನ್, ಎಂ.ಆರ್. ಗಿರೀಶ್, ಎ.ಚೆನ್ನಕೇಶವ, ಎಂ.ವಿ.ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net