

ಚಾಮರಾಜನಗರ: ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾವಟ್ಟದ ಸಿಬಿಎಸ್‌ಇ ಕ್ರೀಡಾಕೂಟದಲ್ಲಿ ಸೇವಾಭಾರತಿ ಪಬ್ಲಿಕ್ ಶಾಲೆಯು ಸತತ 6ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಜಿಲ್ಲೆಯ ವಿವಿಧ ಸಿಬಿಎಸ್‌ಇ ಶಾಲೆಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ಚಾಮರಾಜನಗರದ ಸೇವಾಭಾರತಿ ಪಬ್ಲಿಕ್ ಶಾಲೆಯು ಚಾಂಪಿಯನ್ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಅಥ್ಲೇಟಿಕ್ಸ್ ಬಾಲಕರಲ್ಲಿ ಸುಕೃತ್ ಮತ್ತು ಬಾಲಕಿಯರಲ್ಲಿ ಬಿ.ಪ್ರಕೃತಿ, ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಬಿ.ಧನುಷ್ ಮತ್ತು ಬಾಲಕಿಯರಲ್ಲಿ ಅಪ್ಸರಾ ಮತ್ತು ಎಂ.ಚಾರ್ವಿ ಚಾಂಪಿಯನ್ ಸ್ಥಾನ ಗಳಿಸಿ ವಿಜಯ ಸಾಧಿಸಿದ್ದಾರೆ. ಸತತ 6 ವರ್ಷಗಳಿಂದ ಚಾಂಪಿಯನ್ ಟ್ರೋಫಿ ಪಡೆಯುತ್ತಿರುವ ಮಕ್ಕಳ ಸಾಧನೆಗೆ ಸೇವಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಶಾಲಾ ಸಮಸ್ತ ಶಿಕ್ಷಕ - ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.