ಸೇವಾಭಾರತಿ ಕನ್ನಡ ಶಾಲೆಗೆ ಶೇ.86 ರಷ್ಟ ಲಿತಾಂಶ

01
Published on

ಚಾಮರಾಜನಗರ: ನಗರದ ಸೇವಾಭಾರತಿ ಕನ್ನಡ ಮಾಧ್ಯಮ ಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.86 ರಷ್ಟು ಲಿತಾಂಶವನ್ನು ಪಡೆದುಕೊಂಡಿದೆ.

ಸೇವಾ ಭಾರತಿ ಶಾಲೆಯಿಂದ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 43 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 3 ಅತ್ಯುನ್ನತ ಶ್ರೇಣಿಯಲ್ಲಿ, 24 ಪ್ರಥಮ ದರ್ಜೆಯಲ್ಲಿ, 8 ದ್ವಿತೀಯ ದರ್ಜೆಯಲ್ಲಿ ಹಾಗೂ 2 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಸೇವಾ ಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆಯು ತಾಲೂಕಿನ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ವಿದ್ಯಾರ್ಥಿನಿ ಶ್ರೀಲಕ್ಷ್ಮೀ 598 ಅಂಕಗಳನ್ನು ಪಡೆದುಕೊಂಡು ಶೇ.95.68 ಲಿತಾಂಶದೊಂದಿಗೆ ಶಾಲೆಗೆ ಹಾಗೂ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. 573 ಅಂಕಗಳೊಂದಿಗೆ ವಿದ್ಯಾರ್ಥಿನಿ ಪದ್ಮಾವತಿ ದ್ವಿತೀಯ ಹಾಗೂ 570 ಅಂಕಗಳೊಂದಿಗೆ ವಿದ್ಯಾರ್ಥಿನಿ ಆರ್.ಕೀರ್ತನಾ ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉತ್ತಮ ಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿಗಳಿಘೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net