

ಕಲಬುರಗಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪರ‍್ಣ ತೊಡಗಿಸಿಕೊಂಡ ವಿದ್ಯರ‍್ಥಿ ಜೀವನದಲ್ಲಿ ಆರ‍್ಶ ವ್ಯಕ್ತಿಯಾಗುತ್ತಾನೆ ಎಂದು ಶ್ರೀ ಚನ್ನಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಶರಣಪ್ಪ ಚನ್ನೂರ ಹೇಳಿದರು.
ನಗರದ ಗೋದುತಾಯಿ ಕಾಲನಿಯ ಶಿವಮಂದಿರದಲ್ಲಿ ಶ್ರೀ ಚನ್ನಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾತನಾಡಿ, ಶಿಬಿರಗಳಿಂದ ಗ್ರಾಮೀಣ ಜನಜೀವನ, ಒಡನಾಟ ಅರಿವಿಗೆ ಬರುತ್ತದೆ. ಭವಿಷ್ಯದಲ್ಲಿ ಸಾಮಾಜಿಕ ಬದ್ಧತೆಯಿಂದ ಜೀವನ ನಡೆಸಲು ಪ್ರೇರಣೆ ದೊರೆಯುತ್ತದೆ ಎಂದರು.
ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಹಳ್ಳಿ ಜನರಿಗೆ ಆರೋಗ್ಯ, ಕಾನೂನು, ಪರಿಸರ, ನರ‍್ಮಲ್ಯ, ಶಿಣ, ಸಾಮಾಜಿಕ ಪಿಡುಗು, ಭ್ರಷ್ಟಾಚಾರ ನಿಮರ‍್ಲನೆ, ಸ್ತ್ರೀ ಸಬಲೀಕರಣಕ್ಕೆ ಶಕ್ತಿ ತುಂಬಬೇಕು ಎಂದರು. ಶಿವಕುಮಾರ ಇಬ್ರಾಹಿಂಪುರ, ಅರುಣಕುಮಾರ ತವಡೆ, ಸಂಯೋಜಕರಾದ ಸರಸ್ವತಿ ಕಾಂಬಳೆ, ಕರ‍್ತಿ ಇತರರಿದ್ದರು.