ಸೇವಾ ಮನೋಭಾವ ರೂಢಿಸಿಕೊಳ್ಳಲಿ - ಪರಮಾತ್ಮರಾಜ ಮಹಾರಾಜರು

01
Published on

ನಿಪ್ಪಾಣಿ: ಪರಸ್ಪರ ಸಹಾಯ, ಸಹಕಾರ ಹಾಗೂ ಸೇವಾ ಮನೋಭಾವದಿಂದ ಭಕ್ತಿಸೇವೆ ಸಲ್ಲಿಸಿದಾಗ ಮಾತ್ರ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ ಎಂದು ಆಡಿಯ ದತ್ತಾತ್ರೇಯ ದೇವಸ್ಥಾನದ ಪರಮಾತ್ಮರಾಜ ಮಹಾರಾಜರು ಹೇಳಿದರು.

ತಾಲೂಕಿನ ಆಡಿ ಗ್ರಾಮದ ಸಂಜೀವನಗಿರಿ ಬೆಟ್ಟದಲ್ಲಿನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀದತ್ತ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಜೆ ಪರಮಾತ್ಮರಾಜ ಮಹಾರಾಜರ ಸಾನ್ನಿಧ್ಯದಲ್ಲಿ ದತ್ತ ಗುರುಗಳ ತೊಟ್ಟಿಲೋತ್ಸವ ನಡೆಯಿತು. ಭಕ್ತರು ಗುಲಾಲ್, ಹೂಗಳನ್ನು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಭಕ್ತಿ ಅರ್ಪಿಸಿದರು. ತೇಜಸ್ವಿನಿ ಸುತಾರ, ಭಾರತಿ ಮೋರೆ ತೊಟ್ಟಿಲು ಸಂಗೀತ ಸೇವೆ ನೀಡಿದರು.

ದೇವಿದಾಸ ಮಹಾರಾಜ, ವಿರಾಗಿದಾಸ ಮಹಾರಾಜ, ಉತ್ತರಾಖಂಡದ ವಿಷ್ಣು ಚೈತನ್ಯಜಿ ಮಹಾರಾಜ, ಕಾಕಾ ಮಹಾರಾಜ ವಿಟೇಕರ್, ರಾಮ ಮಹಾರಾಜ, ನಾಮದೇವ ಮಹಾರಾಜ, ಅಮೋಲ ಮಹಾರಾಜ, ಜ್ಞಾನೇಶ್ವರ ಮಹಾರಾಜ, ಚಿದಾನಂದ ಮಹಾರಾಜ, ಮಾರುತಿ ಮಹಾರಾಜ, ಸಾಧನ ಮಹಾರಾಜ, ಶ್ರೀಧರ ಮಹಾರಾಜ, ಮಾರುತಿ ಮಹಾರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net