ಸೇವಾ ಮನೋಧರ್ಮವೇ ಶ್ರೇಷ್ಠ ಧರ್ಮ

bdr2
ಹಾರಕೂಡ ಶ್ರೀಮಠದಲ್ಲಿ ಮಠದ ಸೇವಕರಿಂದ ಆಯೋಜಿಸಿದ್ದÀ ಗುರುವಂದನೆ ಹಾಗೂ 703ನೇ ತುಲಾಭಾರ ಸೇವೆ ಸಮಾರಂಭವನ್ನು ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಹಜರತ್ ಉಸ್ಮಾನಖಾನ್ ಮೀರಜಾಯಿ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಸುಭಾಷ ಮುರುಡ ಇತರರಿದ್ದರು.
Published on

ಬಸವಕಲ್ಯಾಣ: ಸೇವಾ ಮನೋಧರ್ಮವೇ ಶ್ರೇಷ್ಠ ಧರ್ಮವಾಗಿದೆ, ಎಲ್ಲ ಬಗೆಯ ಸೇವೆಯಲ್ಲಿ ಶುದ್ಧ ಅಂತಃಕರಣ ಹೊನಲಾಗಿ ಹರಿಯುತ್ತಿರಬೇಕು. ಹಾಗೆಯೇ ಬದುಕಿನಲ್ಲಿ ಪರಿಸ್ಥಿತಿ ಬದಲಾದರೂ, ಮನಸ್ಥಿತಿ ಬದಲಾಗದಂತೆ ಸಮಚಿತ್ತದಿಂದ ಸೇವೆ ಮಾಡುವುದರಿಂದ ಶ್ರೇಯಸ್ಸು ಲಭಿಸುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ಮಠದ ಸೇವಕರಿಂದ ಮಂಗಳವಾರ ಆಯೋಜಿಸಿದ್ದ ಗುರುವಂದನೆ ಹಾಗೂ 703ನೇ ತುಲಾಭಾರ ಸೇವೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಗುರುವಿನ ಸೇವೆಯಿಂದ ಪುಣ್ಯ ಸಂಪಾದನೆಯಾಗಿ ಜನನ-ಮರಣಗಳ ಬಂಧನದಿAದ ಮುಕ್ತಿ ಪಡೆಯಬಹುದಾಗಿದೆ. ಗುರುವಿನಿಂದ ಪಡೆದ ಅರುವಿನ ಬೆಳಕಿನಲ್ಲಿ ನಮ್ಮ ಇರುವಿಕೆಯ ಮೂಲ ಉz್ದೆÃಶ ಅರಿತರೆ ಅದೊಂದು ದೊಡ್ಡ ಸಾಧನೆಯಾಗಬಲ್ಲದು ಎಂದರು.

ಆನAದರಾವ ಝಳಕೆ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಶೀಲವಂತ ಭಿನ್ನವತ್ತಳೆ ವಾಚನ ಮಾಡಿದರು. ಹಜರತ್ ಉಸ್ಮಾನಖಾನ್ ಮೀರಜಾಯಿ, ಮಲ್ಲಿನಾಥ ಹಿರೇಮಠÀ, ಮುಖಂಡರಾದ ಬಾಬುಹೊನ್ನಾ ನಾಯಕ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಸುಭಾಷ ಮುರುಡ ಮತ್ತು ಮಠದ ಸಮಸ್ತ ಸೇವಕರು ಇದ್ದರು.

ರಮೇಶ ರಾಜೋಳೆ ನಿರೂಪಣೆ ಮಾಡಿದರು. ಚನ್ನಬಸಪ್ಪ ಮೀನಹಾಬಾಳ ಹಾಗೂ ಶರಣಪ್ಪ ಸುಂಠಾಣ ಪ್ರಾರ್ಥನೆ ಗೀತೆ, ಕಾರ್ತಿಕ ಸ್ವಾಮಿ ಯಲದಗುಂಡಿ ಮತ್ತು ಸಂಗಡಿಗರು ರುದ್ರ ಸಂಗೀತ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net