

ಕಲಬುರಗಿ: ಸಾಮಾಜಿಕ ಪರಿವರ್ತನೆಯಡೆಗೆ ಘೋಷವಾಕ್ಯದೊಂದಿಗೆ ಸೇವಾ ಭಾರತಿ ಟ್ರಸ್ಟ್ ರಜತ ಮಹೋತ್ಸವದ ಸಂಭ್ರಮದಲ್ಲಿ ಇದ್ದು, ಮಹೋತ್ಸವದ ಉದ್ಘಾಟನಾ ಸಮಾರಂಭ ಸೆ.೨೯ರಂದು ಬೆಳಗ್ಗೆ ೧೧ಕ್ಕೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ ಟ್ರಸ್ಟ್ ವಿಶ್ವಸ್ಥ ರಮೇಶ ತಿಪ್ಪನೂರ ಹೇಳಿದರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹಾಗೂ ಮುಗಳನಾಗಾಂವದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯದಲ್ಲಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಸೇವಾ ಭಾರತಿ ಟ್ರ¸್ಟï ಹುಬ್ಬಳ್ಳಿಯ ಕಾರ್ಯದರ್ಶಿ ಡಾ.ರಘು ಅಕಮಂಚಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಅನಿಲ ಬಿಡವೆ, ಸೇವಾ ಭಾರತಿ ಟ್ರ¸್ಟï ಹುಬ್ಬಳ್ಳಿ ಅಧ್ಯP್ಷÀ ಪೂರ್ಣಚಂದ್ರರಾವ ಘಂಟಸಾಲ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸೇವಾ ಭಾರತಿ, ವಿದ್ಯಾವಿಕಾಸ ಪ್ರಕಲದ ಜಿ¯್ಲÁ ಸಂಯೋಜಕ ಚಂದ್ರಕಾAತ ಕಲಕೋರಿ, ನಾಗರಾಜ್ ದೇಶಪಾಂಡೆ, ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.