ಸೇವಾ ಭದ್ರತೆ,ವೇತನ ಪಾವತಿಗೆ ಒತ್ತಾಯಿಸಿ ನರೇಗಾ ನೌಕರರ ಪ್ರತಿಭಟನೆ

ctd--zp-----4
Published on

ಚಿತ್ರದುರ್ಗ: ಸಕಾಲಕ್ಕೆ ವೇತನ ಪಾವತಿ ಹಾಗೂ ಸೇವಾ ಭದ್ರತೆಗಾಗಿ ಒತ್ತಾಯಿಸಿ ನರೇಗಾ ಹೊರಗುತ್ತಿಗೆ ನೌಕರರು,ರಾಜ್ಯನರೇಗಾ ನೌಕರರ ಕ್ಷೇಮಾಭಿ ವೃದ್ಧಿ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಜಿಪಂ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನರೇಗಾದಡಿ ಗ್ರಾಮೀಣರ ವಲಸೆ ನಿಲ್ಲಿಸಿ ಸ್ವಗ್ರಾಮಗಳಲ್ಲೇ ಅವರಿಗೆ ಕೆಲಸ ಒದಗಿಸುವುದು,ಅವರ ವೈಯಕ್ತಕ ಆಸ್ತಿಗಳ ಸುಸ್ಥಿರತೆ ಮ ತ್ತು ಗ್ರಾಮಗಳ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ಸಮುದಾಯ ಸ್ತಿರಾಸ್ಥಿಗಳ ಸೃಜಿಸುವುದರೊಂದಿಗೆ ಗ್ರಾಮೀಣಾಭಿವೃದ್ಧಿಗೆ ಮುಂಚೂಣಿಯಲ್ಲಿ ಕಳೆದ 15 ವರ್ಷಗಳಿಂದ ನಾನಾ ಹುದ್ದೆಗಳಲ್ಲಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಎಡಿಪಿಸಿ,ಡಿಎಂಐಎಸ್,ಐಇಸಿ,ಲೆಕ್ಕ ವ್ಯವಸ್ಥಾಪಕ,ತಾಂತ್ರಿಕ ಸಂಯೋಜಕ,ಎಂಐಎಸ್, ಐಇಸಿ, ಆ ಡಳಿತ ಸಹಾಯಕ,ತಾಂತ್ರಿಕ ಸಹಾಯಕ,ಡಿಇಒ,ಗ್ರಾಮ ಕಾಯಕ ಮಿತ್ರ,ಬಿಎಫ್‌ಟಿಗಳು ಕಳೆದ 15 ವರ್ಷಗಳಿಂ ದ ಕೆಲಸ ನಿರ್ವಹಿಸುತ್ತಿ ದ್ದಾರೆ. ಆದರೆ ಸೇವಾ ಭದ್ರತೆ ಇಲ್ಲ,ಐದು ತಿಂಗಳಿಂದ ವೇತನವೂ ಪಾವತಿ ಆಗಿಲ್ಲ. ಇದರಿಂದ ನೌಕರರ ಮತ್ತು ಅವರ ಕುಟುಂಬ ವರ್ಗ ದವರ ಜೀವನ ನಿರ್ವಹಣೆ ಬಹು ದುಸ್ತರವಾಗುತ್ತಿದೆ.

ಬಾಕಿ ವೇತನ ತ್ವರಿತ ಪಾವತಿಸಿ ಮುಂದಿನ ದಿನಗಳಲ್ಲಿ ವೇತನ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ನಿಗದಿತ ಅವಧಿಯಲ್ಲಿ ಮಾಸಿಕ ವೇತನವನ್ನು ಪಾವತಿಸಬೇಕು. ನೌಕರರಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಜಿಪಂ ಡಿಎಸ್ ಕೆ.ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್,ಉಪಾಧ್ಯಕ್ಷರಾದ ಉಮೇಶ್,ಸಹನಾ,ಕಾರ‌್ಯದರ್ಶಿ ಶಿವಕುಮಾರ್,ರಾಜ್ಯಸಮಿತಿ ಸದಸ್ಯರಾದ ಸಂ ತೋಷ್‌ಕುಮಾರ್,ಸತ್ಯನಾರಾಯಣ,ಉಮಾಶಂಕರ್,ಕಾಂತರಾಜ್,ಅರ್ಜುನ್,ಜ್ಯೋತಿ,ಎಚ್.ಎಸ್.ಗೋವಿಂದ,ರೋಜಾ,ಭೂಪಾಲ್ ನಾಯಕ ಇತರರು ಇದ್ದರು.

(ಸಿಟಿಡಿ 27 ಸ್ಟ್ರೈಕ್-ಝೆಡ್‌ಪಿ)

ಸೇವಾಕಾಯಂಗೆ ಒತ್ತಾಯಿಸಿ ನರೇಗ ಹೊರಗುತ್ತಿಗೆ ನೌಕರರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಮಂಜುನಾಥ್,ಉಮೇಶ್,ಸಹನಾ,ಶಿವಕುಮಾರ್,ರಾಜ್ಯಸಮಿತಿ ಸದಸ್ಯರಾದ ಸಂ ತೋಷ್‌ಕುಮಾರ್,ಸತ್ಯನಾರಾಯಣ,ಉಮಾಶಂಕರ್,ಕಾಂತರಾ ಜ್,ಅರ್ಜುನ್,ಜ್ಯೋತಿ,ಎಚ್.ಎಸ್.ಗೋವಿಂದ,ರೋಜಾ,ಭೂಪಾಲ್ ನಾಯಕ ಇತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net