ಸೇವನೆಗೆ ಯೋಗ್ಯವಲ್ಲದ ಮದ್ಯ ನಾಶ

19Kush04 (1)
ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ಕುಶಾಲನಗರದಲ್ಲಿ ನಾಶ ಮಾಡಲಾಯಿತು. ಆರ್.ಎಂ.ಚೈತ್ರಾ, ಜಿ.ಎಂ.ಮಹಾದೇವಯ್ಯ, ಬಿ.ಎಸ್.ಲೋಕೇಶ್, ನಾಗರಾಜು, ರಶ್ಮಿ , ಕುಮಾರಿ ಇದ್ದರು.
Published on

ಕುಶಾಲನಗರ: ಸಮೀಪದ ಸುಂದರ ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದ, ಅವಧಿ ಮೀರಿ ಮದ್ಯವನ್ನು ಬುಧವಾರ ನಾಶಪಡಿಸಲಾಯಿತು.

ಅಬಕಾರಿ ಇಲಾಖೆಯ ಸೋಮವಾರಪೇಟೆ ತಾಲೂಕು ಉಪ ಅಧೀಕ್ಷಕಿ ಆರ್.ಎಂ.ಚೈತ್ರಾ ನೇತೃತ್ವದಲ್ಲಿ 4.33 ಲಕ್ಷ ರೂ. ಮೌಲ್ಯದ ಅವಧಿ ಮೀರಿದ 237 ಬಾಕ್ಸ್‌ನ ವಿವಿಧ ಕಂಪನಿಯ ಬಿಯರ್ ಹಾಗೂ 103 ಬಿಡಿ ಬಾಟಲಿಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಗುಂಡಿಗೆ ಸುರಿದು ನಾಶಪಡಿಸಲಾಯಿತು.

ಕೆ.ಎಸ್.ಬಿ.ಸಿ.ಎಲ್ ಘಟಕದ ವ್ಯವಸ್ಥಾಪಕ ಜಿ.ಎಂ.ಮಹಾದೇವಯ್ಯ, ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಬಿ.ಎಸ್.ಲೋಕೇಶ್, ಅಬಕಾರಿ ಸಿಬ್ಬಂದಿ ನಾಗರಾಜು, ರಶ್ಮಿ , ಪೊಲೀಸ್‌ಇಲಾಖೆಯ ಎಎಸ್‌ಐ ಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net