ಸೇಪಿಯೆಂಟ್, ಮಹಾಜನ ತಂಡ ಫೈನಲ್ ಪ್ರವೇಶ

football
Published on


ಮೈಸೂರು:
ಉತ್ತಮ ಪ್ರದರ್ಶನ ಮುಂದುವರೆಸುವಲ್ಲಿ ಯಶಸ್ವಿಯಾದ ಸೇಪಿಯೆಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡಗಳು 2021-22ನೇ ಸಾಲಿನ ಮೈಸೂರು ವಿಶ್ವವಿದ್ಯಾಲಯ ಚಾಮುಂಡಿ ವಲಯ ಅಂತರ ಕಾಲೇಜು ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿವೆ.


ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಸ್ಪೋರ್ಟ್ಸ್ ಪೆವಿಲಿಯನ್‌ನ ಫುಟ್‌ಬಾಲ್ ಮೈದಾನದಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಆರಂಭವಾಗಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.


ಬುಧವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡವು 1-0 ಗೋಲುಗಳಿಂದ ಸೇಂಟ್ ಫಿಲೋಮಿನಾ ಕಾಲೇಜು ವಿರುದ್ಧ ರೋಚಕ ಜಯ ಪಡೆದರು. ಪಂದ್ಯದಲ್ಲಿ ಏಕೈಕ ಗೋಲು ಬಾರಿಸಿದ ಮೇಧೋ ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡವನ್ನು ಫೈನಲ್ ತಲುಪಿಸುವಲ್ಲಿ ಯಶಸ್ವಿಯಾದರು.


ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಸೇಪಿಯೆಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ತಂಡ 4-3 ಗೋಲುಗಳಿಂದ ಮೈಕಾ ಕಾಲೇಜು ವಿರುದ್ಧ ಜಯ ದಾಖಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net