ಸೇನೆಯಲ್ಲಿ ಸೇವೆ ಸಲ್ಲಿಸಿದರೆ ದೇಶಪ್ರೇಮ ವೃದ್ಧಿ

15CKD2
Published on

ಚಿಕ್ಕೋಡಿ: ಸೇನೆಯಲ್ಲಿ ಸೇವೆ ಸಲ್ಲಿಸುವುದರಿಂದ ದೇಶಪ್ರೇಮ, ಶಿಸ್ತು, ಹೆಚ್ಚುತ್ತದೆ ಎಂದು ನಿವೃತ್ತ ಸುಭೇದಾರ ಮೇಜರ್ ಸಿದ್ದಪ್ಪ ಕಮತೆ ಹೇಳಿದರು.

ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಾತಂತ್ರ‍್ಯ ದಿನಾಚಾರಣೆ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಸಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.

ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ಮಾತನಾದರು. ಸಿದ್ದಪ್ಪ ಕಮತೆ ಅವರನ್ನು ಸನ್ಮಾನಿಸಲಾಯಿತು.

ಸೃಷ್ಟಿ ಪಾಟೀಲ, ಧನಶ್ರೀ ಪಾಟೀಲ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿ ವಿನಯ ಮನಗೂಳೆ, ಕುಮಾರ ಚೌಗಲಾ, ಪ್ರದೀಪ ಹೊದ್ಲೂರ, ಡಾ.ವೀರಣ್ಣ ಮೋದಿ, ಸಂಗೀತಾ ವಾಟೆಗಾಂವಕರ, ಡಾ.ಸಂಜಯ ಅಂಕಲಿ, ಡಾ.ಸಂಜಯ ಪುಜಾರಿ, ಡಾ.ಜಗನ್ನಾಥ ಜಾಧವ, ಡಾ.ಸಂಜಯ ಹನಗಂಡಿ, ಸುನೀಲ ಶಿಂಧೆ, ಡಾ.ಸಚಿನ ಮೆಕ್ಕಳಕಿ, ತೇಜಸ್ವಿನಿ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net