ಸೇನೆಗೆ ಸೇರುವ ಅವಕಾಶ ಸಿಕ್ಕರೆ ಯೋಧರಾಗಿ

27_HSN_06
ನಗರದ ಬಿ.ಎಂ. ರಸ್ತೆ ಬಳಿ ಇರುವ ರೋಟರಿ ಸುವರ್ಣ ಭವನದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಶನಿವಾರ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಡಾ. ತನುಜಾ ಮಾತನಾಡಿದರು. ಈ ವೇಳೆ ಕ್ಯಾಪ್ಟನ್ ಜಯರಾಂ, ಗಿರೀಶ್, ವನಿತಾ, ರತಿ, ಪೂಜಾ ರಘು ನಂದನ್ ಉಪಸ್ಥಿತರಿದ್ದರು.
Published on

ಹಾಸನ: ಈ ಕಾರ್ಯಕ್ರಮದಲ್ಲಿ ನೆರದಿರುವ ವಿದ್ಯಾರ್ಥಿಗಳಲ್ಲಿ ಕನಿಷ್ಠ 10 ಜನ ವಿದ್ಯಾರ್ಥಿಗಳಾದರೂ ಸೇನೆಗೆ ಸೇರಬೇಕು ಎಂದು ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಅಧ್ಯಕ್ಷೆ ಡಾ. ತನುಜಾ ಅಭಿಪ್ರಾಯಪಟ್ಟರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ರೋಟರಿ ಸುವರ್ಣ ಭವನದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಶನಿವಾರ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಮಗ ಇಂಜಿನಿಯರ್ ಆಗಬೇಕೆಂದು ನಮಗೂ ಆಸೆಗಳಿವೆ. ಆದರೆ ಅವನನ್ನು ಒಬ್ಬ ಯೋಧನಾಗಿ ನೋಡಬೇಕು ಎನ್ನುವ ಕನಸ್ಸನ್ನು ಇಟ್ಟುಕೊಂಡಿದ್ದೇನೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ನನ್ನ ಮಗನನ್ನು ಸೇನೆಗೆ ಸೇರಿಸುತ್ತೇನೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಇಷ್ಟೊಂದು ಜನ ಕಾಲೇಜು ಮಕ್ಕಳು ಇದ್ದು, ನಿಮ್ಮಲ್ಲಿ ಐದರಿಂದ ಹತ್ತು ಜನರು ದೇಶ ಕಾಯುವ ಸೈನಿಕನಾಗಿ ನಿಂತರೆ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ಥಕತೆ ಸಿಗುತ್ತದೆ. ವಿದ್ಯಾರ್ಥಿಗಳು ಪೋಷಕರಿಗೆ ಒಳ್ಳೆಯ ಮಕ್ಕಳಾಗಿ ದೇಶಕ್ಕೆ ಉತ್ತಮ ಪ್ರಜೆ ಆಗಬೇಕು. ಎಲ್ಲಾ ಅಪ್ಪ-ಅಮ್ಮಂದಿರಿಗೆ ಒಂದು ಕನಸ್ಸು ಇರುತ್ತವೆ. ಮಕ್ಕಳು ಅದನ್ನು ನೆರವೇರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಯೋಧರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು. ಭಾಗವಹಿಸಿದ್ದ ಸ್ಟೂಡೆಂಟ್ ಕಾಮರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಯೋಧರ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಮಿ ಪುಸ್ತಕವನ್ನು ನೀಡಲಾಯಿತು. ಇನ್ನು ಗಡಿಯಲ್ಲಿ ಯುದ್ಧ ಮಾಡಿ ಸೈನಿಕರು ಶ್ರಮಿಸುತ್ತಿರುವ ಬಗ್ಗೆ ಒಂದು ನಾಟಕ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಇದೆ ವೇಳೆ ಮಾಜಿ ಸೈನಿಕ ಕ್ಯಾಪ್ಟನ್ ಜಯರಾಂ, ಸ್ಟೂಡೆಂಟ್ ಕಾಮರ್ಸ್ ಕಾಲೇಜಿನ ಎಚ್‌ಒಡಿ ಗಿರೀಶ್, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಕಾರ್ಯದರ್ಶಿ ವನಿತಾ, ಚಾರಿಟರ್ ಪ್ರೆಸಿಡೆಂಟ್ ರತಿ, ಪೂಜಾ ರಘು ನಂದನ್, ಯಶೋಧಾ, ಅರ್ಚನಾ, ವಾಣಿ ನಾಗೇಂದ್ರ, ದೀಪು, ಚಂದ್ರಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net