ಸೇನಾನಿಗಳ ತ್ಯಾಗ-ಬಲಿದಾನ ಅಪಾರ

HBD1
ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ)ದ ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರÈ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆ ಕೇಂದ್ರಸಮಿತಿ ಕಾರ್ಯಾಧ್ಯP್ಷÀ ಕೇಶವರಾವ ತಳಘಟಕರ ಸನ್ಮಾನಿಸಿದರು. ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಪವನಕುಮಾರ, ಸೋಮಯ್ಯ ಹಿರೇಮಠ, ರಮೇಶ ಮಹೇಂದ್ರಕರ, ಶಿವಕುಮಾರ ತೀರ್ಥಾ, ಗುಂಡಯ್ಯ ತೀರ್ಥಾ, ಪ್ರಭುರಾವ ದುರ್ಗದ, ಬಸವರಾಜ ದುಬಲಗುಂಡಿಕರ, ಚಂದ್ರಕಾAತ ಬಿರಾದಾರ ಇತರರಿದ್ದರು.
Published on

ಹುಮನಾಬಾದ್: ದೇಶಕ್ಕೆ ಸ್ವಾತಂತ್ರÈ ಒದಗಿಸಿ ಕೊಡುವಲ್ಲಿ ಹಿರಿಯರ ಹಾಗೂ ಸ್ವಾತಂತ್ರÈ ಸೇನಾನಿಗಳ ಅಪಾರ ತ್ಯಾಗ ಬಲಿದಾನ ಅಡಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲï ಹೇಳಿದರು.

ಪಟ್ಟಣದ ತಹಸಿಲï ಕಚೇರಿ ಆವರಣದಲ್ಲಿ ಗುರುವಾರ ತಾಲೂಕು ಆಡಳಿತದಿಂದ ನಡೆದ 78ನೇ ಸ್ವಾತಂತ್ರÈ ದಿನಾಚರಣೆಯಲ್ಲಿ ಅಧ್ಯP್ಷÀತೆ ವಹಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರö್ಯಕ್ಕಾಗಿ ಮಹ್ಮಾತಗಾಂಧಿ, ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭಾಯಿ ಪಟೇಲï, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜ ಸೇರಿ ಅನೇಕ ಮಹಾನ್ ನಾಯಕರ ಹೋರಾಟದ ಬಗ್ಗೆ ಹಾಗೂ ಇಲ್ಲಿನ ಸ್ವಾತಂತ್ರÈ ಸೇನಾನಿಯಾಗಿದ್ದ ರಾಮಚಂದ್ರ ವೀರಪ್ಪ ಆರ್ಯ ಮತ್ತಿತರ ತ್ಯಾಗ ಮಕ್ಕಳು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ದೇಶ ಪ್ರೇಮ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿ ನನ್ನ ಮುಖ್ಯ ಉz್ದೆÃಶವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಅಭಿವೃದ್ಧಿ ಕುಂಟಿತಗೊAಡಿದೆ. ಮಂಜೂರಾದ ಕಾಮಗಾರಿಗಳು ಸಹ ಸ್ಥಗಿತಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರ ಪರ ನಾರಿ ಶಕ್ತಿ ವಂದನಾ ಯೋಜನೆ ಸೇರಿದೆ ಎಂದರು.

ಚಿಂತಕ ಕೆ.ಎಸ್.ಬಂಧು ಉಪನ್ಯಾಸ ನೀಡಿದರು. ಪ್ರತಿಭಾಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಅಂಜುA ತಬಸ್ಸುಮ್ ಪ್ರಾಸ್ತಾವಿಕ ಮಾತನಾಡಿದರು. ಸುಭಾಷ ಆರ್ಯ, ಪುರಸಭೆ ಸದಸ್ಯ ರಮೇಶ ಕಲ್ಲೂರ, ಕಸಾಪ ತಾಲೂಕು ಅಧ್ಯP್ಷÀ ಸಿದ್ದಲಿಂಗ, ತಾಪಂ ಇಒ ದೀಪಿಕಾ ನಾಯ್ಕರ ಇತರರಿದ್ದರು.

ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತಿ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net