ಸೇತುವೆಗೆ ಬಸ್ ಡಿಕ್ಕಿ, 6 ಪ್ರಯಾಣಿಕರಿಗೆ ಗಾಯ

1YLP1-ACCIDENT
Published on

ಯಲ್ಲಾಪುರ: ಕೆಎಸ್​ಆರ್​ಟಿಸಿ ಬಸ್ ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದಿದ್ದರಿಂದ 6 ಪ್ರಯಾಣಿಕರು ಗಾಯಗೊಂಡ ಘಟನೆ ಯಲ್ಲಾಪುರ- ಹಳಿಯಾಳ ರಸ್ತೆಯಲ್ಲಿ ಡೌಗಿನಾಲಾ ಬಳಿ ನಡೆದಿದೆ. ಕಿರವತ್ತಿಯ ಇಂದಿರಾನಗರದ ರೋಸಿ ಕಿರಣ ಡಯಾಸ್ ಸಿದ್ದಿ, ನಿಶಲ್ ಮನವೆಲ್ ಸಿದ್ದಿ, ಅಶ್ವಿನಿ ಲಾರೆನ್ಸ್ ಸಿದ್ದಿ, ಶಾಂತಾ ಮನವೆಲ್ ಸಿದ್ದಿ ಹಾಗೂ ಕಾಳಮ್ಮನಗರದ ಫಹೀರಬಾನು ರಿಯಾಜ ಅಹ್ಮದ್ ಗಾಯಗೊಂಡವರು. ಬೆಳಗಾವಿಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಶಿರಸಿ ಘಟಕದ ಬಸ್ ತಾಲೂಕಿನ ಡೌಗಿನಾಲಾದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಇದ್ದ ಮೋರಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​ನ ಮುಂಭಾಗ ಜಖಂಗೊಂಡಿದೆ. ಚಾಲಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net