

ಮೂಡಲಗಿ: ಪಟ್ಟಣದಿಂದ ಸುಣಧೋಳಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬೆಕ್ ಸೇತುವೆಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಟನೆ ಗುರುವಾರ ನಡೆದಿದೆ. ತಾಲೂಕಿನ ನಾಗನೂರ ಪಟ್ಟಣದ ನಿವಾಸಿ ಹಣಮಂತ ನಾಯಕ (26) ಮೃತ. ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟನಾ ಸ್ಥಳಕ್ಕೆ ಮೂಡಲಗಿ ಪಿಎಸ್ಐ ರಾಜು ಪೂಜೇರಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.