

ಶ್ರೀರಂಗಪಟ್ಟಣ: ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕಾವೇರಿಯ ಸೇತುವೆ ಮೇಲೆ ಗುರುವಾರ ಮುಂಜಾನೆ ನಿಗದಿಗಿಂತ ಅಪಾರ ಪ್ರಮಾಣದಲ್ಲಿ ಜಲ್ಲಿ ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಲಾರಿಯ ಚಕ್ರ ಸಿಡಿದು ನಿಯಂತ್ರಣ ತಪ್ಪಿ ಸೇತುವೆಗೆ ಅಪ್ಪಳಿಸಿದೆ.
ಲಾರಿಯಲ್ಲಿದ್ದ ಜಲ್ಲಿ ಸುರಿದು ತೆಡೆಗೋಡೆ ಕೆಳಗುರುಳಿದೆ. ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಲಾರಿ ಚಾಲಕ ಹಾಗೂ ಲಾರಿ ಸೇತುವೆ ಕೆಳಗುರುಳುವುದು ತಪ್ಪಿದೆ.