ಸೇತುವೆ ಹಲವರ ಪ್ರಯತ್ನದ ಪ್ರತಿಫಲ

25sgr1 (1)
ಅಂಬಾರಗೋಡ್ಲು- ಕಳಸವಳ್ಳಿ ಸೇತುವೆ ಮೇಲೆ ಸಹೃದಯ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಪ್ರಸನ್ನ ಕೆರೆಕೈ ಅವರನ್ನು ಸನ್ಮಾನಿಸಲಾಯಿತು. ಜಿ.ನಾಗೇಶ್, ಎಚ್.ಜಿ.ಸುಬ್ರಹ್ಮಣ್ಯ ಭಟ್, ಡಾ. ಕೆಳದಿ ವೆಂಕಟೇಶ್ ಜೋಯ್ಸ ಇತರರಿದ್ದರು.
Published on

ಸಾಗರ: ಶರಾವತಿ ಕಣಿವೆ ಹಿನ್ನೀರಿನ ಜನ ಅಂಬಾರಗೋಡ್ಲು- ಕಳಸವಳ್ಳಿ ಸೇತುವೆ ನಿರ್ಮಾಣದ ಕನಸು ನನಸಾದ ಕ್ಷಣ ಅತ್ಯಂತ ಭಾವುಕರಾದೆವು ಎಂದು ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಪ್ರಸನ್ನ ಕೆರೆಕೈ ಹೇಳಿದರು. ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಮೇಲ್ಭಾಗದಲ್ಲಿ ಸಹೃದಯ ಬಳಗದಿಂದ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೇತುವೆ ನಿರ್ಮಾಣಕ್ಕೆ ಹಲವರ ಕೊಡುಗೆ ಇದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಸೇತುವೆ ನಿರ್ಮಾಣ ಸಾಧ್ಯ ಎನ್ನುವ ನಮ್ಮ ಕನಸಿಗೆ ಸೂರ್ತಿ ತುಂಬಿದರು. ಸಂಸದ ಬಿ.ವೈ.ರಾಘವೇಂದ್ರರ ನಿರಂತರ ಶ್ರಮವೂ ಯೋಜನೆ ಹಿಂದೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದರು. ಸೇತುವೆ ನಿರ್ಮಾಣವಾಗಲು ಅನೇಕ ಹೋರಾಟಗಾರರು, ಜನಪ್ರತಿನಿಗಳು ಕೈಜೋಡಿಸಿದ್ದಾರೆ. ಕಾಲಕಾಲಕ್ಕೆ ಅನೇಕರು ಸಹಕಾರ ನೀಡಿದ್ದಾರೆ. ಈ ಹೋರಾಟದಲ್ಲಿ ಭಾಗಿಯಾದ ಎಲ್ಲರ ಪರವಾಗಿ ನಾನು ಸನ್ಮಾನ ಸ್ವೀಕರಿಸಿದ್ದೇನೆ. ನಮ್ಮ ಪ್ರದೇಶದಲ್ಲಿ ಸಾಕಷ್ಟು ಪ್ರಗತಿ ಕಾರ್ಯಗಳು ಆಗಬೇಕಿದೆ. ಚುನಾಯಿತ ಪ್ರತಿನಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್, ಎಚ್.ಜಿ.ಸುಬ್ರಹ್ಮಣ್ಯ ಭಟ್, ಡಾ. ಕೆಳದಿ ವೆಂಕಟೇಶ್ ಜೋಯ್ಸ, ಎಸ್.ಬಸವರಾಜ್, ಆರ್.ಸತೀಶ್, ಶ್ರೀನಾಥ್, ರಾಜು ಮಡಿವಾಳ, ಗಿರೀಶ್ ರಾಯ್ಕರ್, ರಾಜೇಂದ್ರ, ಬಿ.ಡಿ.ರವಿಕುಮಾರ್, ಜಿ.ಎಚ್.ಶಿವಯೋಗಿ, ಲೋಕೇಶಕುಮಾರ್, ಸಂತೋಷ್ ಶೇಟ್, ವಿ.ಟಿ.ಸ್ವಾಮಿ ಇತರರಿದ್ದರು.

ನಮ್ಮ ಜೀವಿತಾವಯಲ್ಲಿ ಇಂತಹ ಸೇತುವೆ ನೋಡುತ್ತೇವೆ ಎಂದು ನಾವು ಭಾವಿಸಿರಲಿಲ್ಲ. ಸೇತುವೆ ಆಗುತ್ತದೆಯೋ, ಇಲ್ಲವೋ ಎಂದು ಮಾತನಾಡಿಕೊಳ್ಳುತ್ತಿದ್ದ ನಾವೀಗ ಸೇತುವೆ ಮೇಲೆ ನಿಂತು ಮಾತನಾಡುತ್ತಿದ್ದೇವೆ ಎನ್ನುವುದು ಹೆಮ್ಮೆ ತಂದಿದೆ. ಶ್ರೀನಿವಾಸ್ ಗದ್ದೆಮನೆ, ತುಮರಿ ಗ್ರಾಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net