

ಕಲಬುರಗಿ: ತಾಲೂಕಿನ ಸರಡಗಿ (ಬಿ) ಗ್ರಾಮದ ಭೀಮಾ ನದಿ ಸೇತುವೆ ಮೇಲೆ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋದ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬುಲಂದ ಫವೇಜ ಕಾಲನಿ ನಿವಾಸಿ ಸೈಯದ್ ಅಲಿ ಬೈಕ್ ಕಳೆದುಕೊಂಡವ. ಗೆಳೆಯನ ಜತೆಗೆ ತಿರುಗಾಡಲು ಸರಡಗಿ (ಬಿ) ಗ್ರಾಮಕ್ಕೆ ಹೋಗಿದ್ದು, ಭೀಮಾ ನದಿ ಸೇತುವೆ ಮೇಲೆ ಬೈಕ್ ನಿಲ್ಲಿಸಿ, ನದಿ ಪಾತ್ರಕ್ಕೆ ಹೋಗಿದ್ದಾರೆ. ಕೆಳಗೆ ಹೋಗಿ ಬರುವ ಹೊತ್ತಿಗೆ ಬೈಕ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.