ಸೇತುವೆ ಮೇಲೆ ತಗ್ಗು-ಗುಂಡಿ ಸೃಷ್ಟಿ

13-11
ರಾಮದುರ್ಗ ತಾಲೂಕಿನ ಸುರೇಬಾನದಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಮೇಲೆ ಗುಂಡಿ ಬಿದ್ದು ಸಂಚಾರಕ್ಕೆ ದುಸ್ತರವಾಗಿದೆ.
Published on

ರಾಮದುರ್ಗ, ಬೆಳಗಾವಿ: ತಾಲೂಕಿನ ಸುರೇಬಾನದಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಸೇತುವೆ ಮೇಲೆ ದೊಡ್ಡ ಪ್ರಮಾಣದ ತಗ್ಗು-ಗುಂಡಿಗಳು ಬಿದ್ದಿದ್ದು. ಸಂಚಾರಕ್ಕೆ ಸರ್ಕಸ್ ಮಾಡುವಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ತೆರೆದು ನೋಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸುರೇಬಾನದ ಹತ್ತಿರ ನಿರ್ಮಿಸಿದ ಸೇತುವೆ ಮೇಲೆ ನೀರು ನಿಂತು ವಾಹನ ಸವಾರರಿಗೆ ಹಾಗೂ ರಸ್ತೆ ಮೇಲೆ ಸಂಚರಿಸುವ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಹದಗೆಟ್ಟಿರುವ ರಸ್ತೆ ಸಮಸ್ಯೆಯ ಕುರಿತಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಾಹನ ಸವಾರರು ಸೇತುವೆ ಮೇಲಿಂದ ಆಯ ತಪ್ಪಿ ಬಿದ್ದರೆ ಕಾಲುವೆ ಪಾಲಾಗುವಂತಾಗಿದೆ. ಕಾಂಕ್ರಿಟ್ ಸೇತುವೆ ಮೇಲೆ ಸತತ ನೀರು ನಿಲ್ಲುವುದರಿಂದ ಸೇತುವೆ ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಸಮಸ್ಯೆಯನ್ನು ಇತ್ಯರ್ಥಪಡಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net