ಸೇತುವೆ ಕುಸಿದು ಸಂಚಾರ ಸ್ಥಗಿತ

klb3
ಕಮಲಾಪುರ ಜೀವಣಗಿ ರಸ್ತೆ ಸೇತುವೆಯಲ್ಲಿ ಕುಸಿದ ಸ್ಥಳಕ್ಕೆ ತಹಸೀಲ್ದಾರ್ ಮಹಮ್ಮದ್ ಮೋಹಸಿನ್, ಪಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ರಿಯಾನ್ ಭೇಟಿ ನೀಡಿ ಪರಿಶೀಲಿಸಿದರು.
Published on

ಕಮಲಾಪುರ: ಎರಡು ದಿನದಿಂದ ಸುರಿಯುತ್ತಿರುವ ಮಳೆ ನೀರಿನ ರಭಸಕ್ಕೆ ಮಂಗಳವಾರ ಬೆಳಗ್ಗೆ ಪಟ್ಟಣದಿಂದ ಜೀವಣಗಿ ಸಂಪರ್ಕಿಸುವ ರಸ್ತೆಯಲ್ಲಿನ ಐದು ದಶಕ ಪುರಾತನ ಸೇತುವೆ ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ. 2022ರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಮಲಾಪುರ-ಜೀವಣಗಿ 2.8 ಕಿಮೀ ರಸ್ತೆ ಡಾಂಬರಿಕರಣ ಮಾಡಲಾಗಿತ್ತು. ಈ ವೇಳೆ ಸ್ಥಳೀಯರು ಹೊಸ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದ್ದರು. ಆದರೆ ಲೋಕೋಪಯೋಗಿ ಅಧಿಕಾರಿಗಳು ಕ್ರಿಯಾಯೋಜನೆಯಲ್ಲಿ ಅನುದಾನವಿಲ್ಲ ಎಂದು ಹೇಳಿದ್ದರು. ಇದೀಗ ಸೇತುವೆ ಕುಸಿದಿದ್ದು, ಆತಂಕ ಎದುರಾಗಿದೆ. ಈ ಮಾರ್ಗದಿಂದ ಜೀವಣಗಿ, ಗೋಗಿ, ಜೀವಣಗಿ ತಾಂಡಾ, ಕಲಮೂಡ, ದಿನಸಿ, ಅಂತಪಾಳ ಇತರ ಗ್ರಾಮಸ್ಥರು ಸಂಚರಿಸುತ್ತಾರೆ. ಸೇತುವೆ ರಸ್ತೆ ಕುಸಿದ ಸ್ಥಳಕ್ಕೆ ತಹಸೀಲ್ದಾರ್ ಮಹಮ್ಮದ್ ಮೋಹಸಿನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಪಿಡಬ್ಲುÈಡಿ ಜೆಇ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net