ಸೇಡಂನಲ್ಲಿ ಸಹಜ ಸ್ಥಿತಿ ಯೋಗ ಶಿಬಿರ ಸೆ.18ರಿಂದ

international day of yoga (1)
Published on

ಸೇಡಂ: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೆ.18ರಿಂದ 13ದಿನಗಳ ಸಹಜ ಸ್ಥಿತಿ ಯೋಗ ಶಿಬಿರ ಆಯೋಜಿಸಲಾಗಿದೆ ಎಂದು ಸಹಜ ಸ್ಥಿತಿ ಯೋಗ ಮತ್ತು ಸತ್ಸಂಗದ ಸಂಚಾಲಕ ಬಸವರಾಜ ಹೊಸೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಿತ್ಯ ಸಾಯಂಕಾಲ 6ಗಂಟೆಯಿಂದ ರಾತ್ರಿ 9ಗಂಟೆವರೆಗೆ ಶ್ರೀ ವಿರುಪಾಕ್ಷ ಗುರೂಜಿಯವರ ಮಾರ್ಗದರ್ಶನದಲ್ಲಿ ಯೋಗ ಶಿಬಿರ ನಡೆಯಲಿದೆ. ಸದರಿ ಶಿಬಿರದಿಂದ ಮಾನವನ ವ್ಯಕ್ತಿತ್ವ ನಿರ್ಮಾಣ, ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ, ಜೀವನದಲ್ಲಿ ಹಿಡಿತ ಹಾಗೂ ಸಮತೋಲನವು ಇದರಿಂದ ಸಾಧ್ಯವಾಗಲಿದೆ. ಆದ್ದರಿಂದ ತಾಲೂಕಿನ ಜನತೆ ಶಿಬಿರದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಮಾಹಿತಿಗಾಗಿ ಬಸವರಾಜ ಹೊಸೂರ 9448891768, ಮನೋಹರ ದೊಂತಾ 9448012672 ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net