ಸೇಡಂನಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು

04-SDMNOV-01
Published on

ಸೇಡಂ: ಪಟ್ಟಣದ ಪೊಲೀಸ್ ಠಾಣೆಯಿಂದ ನ್ಯಾಯಾಲಯದವರೆಗಿನ ಮುಖ್ಯರಸ್ತೆಯಲ್ಲಿದ್ದ ಗೂಡಂಗಡಿಗಳನ್ನು ಪುರಸಭೆ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.
ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ನೇತೃತ್ವದ ತಂಡ ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದಿದ್ದು, ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಕಳೆದ ಹಲವು ವರ್ಷಗಳಿಂದ ಪುರಸಭೆ ಸ್ಥಳದಲ್ಲಿ ಗೂಡಂಗಡಿಗಳನ್ನು ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದು, ಆದರೆ ಪುರಸಭೆಗೆ ಯಾವುದೇ ಬಾಡಿಗೆ ಬರುತ್ತಿರಲಿಲ್ಲ. ಹೀಗಾಗಿ ಇದೇ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿಮರ್ಾಣಕ್ಕಾಗಿ ಸಕರ್ಾರದಿಂದ ಹಣ ಮಂಜೂರಾಗಿದ್ದು, ಆದ್ದರಿಂದ ಅನಧಿಕೃತ ಅಂಗಡಿಗಳ ತೆರವು ಮಾಡಲಾಯಿತು.
ಜೆಸಿಬಿ ಯಂತ್ರ ಸದ್ದು ಮಾಡುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಗೂಡಂಗಡಿಗಳಲ್ಲಿದ್ದ ತಮ್ಮ ಸಾಮಾನುಗಳನ್ನು ಕೊಂಡೊಯ್ದರು.
ಪಿಎಸ್ಐಗಳಾದ ಶಿವಶಂಕರ ಸಾಹು, ಸಂತೋಷ ರಾಠೋಡ್, ಅಯ್ಯಪ್ಪ ಭೀಮಾವರಂ, ಉಪೇಂದ್ರಕುಮಾರ, ತಿಮ್ಮಯ್ಯ, ಪುರಸಭೆ ಅಧಿಕಾರಿಗಳಾದ ನಿಂಗಮ್ಮ ಬಿರಾದಾರ, ಪ್ರಿಯಾಂಕಾ ವಿಭೂತಿ, ಸಾವಿತ್ರಿ ಮದನಕರ್, ಬಸವರಾಜ ಅವಂಟಿ, ಮೊಹಮ್ಮದ್ ಮೊಹಿಯೊದ್ದಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net