ಸೇಡಂನಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮಾಚರಣೆ

Congress
Published on

ಸೇಡಂ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕ್ಷೇತ್ರದ ಶಾಸಕ ಡಾ.ಶರಣಪ್ರಕಾಶ ಪಾಟೀಲ್​ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಪಟ್ಟಣದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶನಿವಾರ ವಿಜಯೋತ್ಸವ ಆಚರಿಸಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು ಕಾಂಗ್ರೆಸ್​, ಡಾ.ಪಾಟೀಲ್​ ಪರ ಘೋಷಣೆ ಕೂಗಿದರು. ಬಳಿಕ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಪ್ರಮುಖ ಬಡಾವಣೆಗಳಲ್ಲೂ ಭರ್ಜರಿ ವಿಜಯೋತ್ಸವ ನಡೆಯಿತು.

ಸದಸ್ಯ ರವೀಂದ್ರ ಜಡೇಕರ್, ಶರಣಪ್ಪ ಮೆಕ್ಯನಿಕ್, ಶ್ರವಣಕುಮಾರ, ಬಸಯ್ಯಸ್ವಾಮಿ ಕೊಡಂಪಳ್ಳಿ, ಮಲ್ಲಿಕಾರ್ಜುನ ಅವರಾಧಿ, ಮಲ್ಲಿಕಾರ್ಜುನ, ವೀರಣ್ಣಗೌಡ ರೆಮ್ಮಣ್ಣಿ, ಶೇಖರಗೌಡ ಪಾಟೀಲ್, ಬಾಲರೆಡ್ಡಿ ಭೂತಪೂರ, ವಿಜಯಕುಮಾರ ಗುತ್ತೇದಾರ, ವೆಂಕಟರೆಡ್ಡಿ ಹಂದರಕಿ, ಅಸ್ಪಾಕ್ ಇತರರಿದ್ದರು.ದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net