ಸೇಡಂನ ವಿವಿಧೆಡೆ ಕಳ್ಳತನಕ್ಕೆ ಯತ್ನ

udp-9-theft
Published on

ಸೇಡಂ: ಪಟ್ಟಣದ ವಿವಿಧೆಡೆ ದರೋಡೆಕೋರರು ಕಳ್ಳತನಕ್ಕೆ ಯತ್ನಿಸಿ, ಏನು ಸಿಗದೆ ಬರಿಗೈಲಿ ವಾಪಸ್ ಆದ ಘಟನೆ ಶುಕ್ರವಾರ ಜರುಗಿದೆ.

ಊಡಗಿ ರಸ್ತೆಯಲ್ಲಿರುವ ನಗರ ಯೋಜನಾ ಪ್ರಾಧಿಕಾರದ ಕಚೇರಿಯ ಬೀಗ ಒಡೆದು, ಕಳ್ಳರು ಒಳ ನುಗ್ಗಿದ್ದಾರೆ. ಮನೆಯಂತಿರುವ ಕಟ್ಟಡದಲ್ಲಿ ಕಚೇರಿ ಇರುವುದು ಗೊತ್ತಾಗಿಲ್ಲ, ಮನೆಯಂದೇ ಭಾವಿಸಿ ಒಳಗೆ ಹೋಗಿದ್ದಾರೆ. ಕಡತ ಬಿಟ್ಟರೆ ಬೇರೆನು ಸಿಕ್ಕಿಲ್ಲ. ಇದಲ್ಲದೆ ಕೆಲವೆಡೆ ಮನೆಗಳ ಬೀಗ ಮುರಿದಿದ್ದು, ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿಲ್ಲ ಎನ್ನಲಾಗಿದೆ.

ಸಿಪಿಐ ಸಂದೀಪಸಿಂಗ್, ಅಪರಾಧ ವಿಭಾಗದ ಪಿಎಸ್‌ಐ ಅರ್ಜುನಪ್ಪ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net