ಸೇಡಂ; ಸಿಮೆಂಟ್ ಕಂಪನಿಗಳಿಂದ ಸ್ಥಳೀಯ ಪ್ರದೇಶ ಅಭಿವೃದ್ಧಿ ಆಗಲಿ

PH 07
Published on

ಸೇಡಂ: ತಾಲೂಕಿನಲ್ಲಿ ಹಲವು ಸಿಮೆಂಟ್ ಕಂಪನಿಗಳು ಉತ್ಪಾದನೆ ಘಟಕ ಹೊಂದಿದ್ದು, ಸಿಎಸ್‌ಆರ್ ಯೋಜನೆಯಡಿ ಸ್ಥಳೀಯ ಪ್ರದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾ ವೀರಶೈವ ಸಮಾಜದ ಸಂಘಟನಾ ಕಾರ್ಯದರ್ಶಿ ಶಿವಕುಮಾರ ನೂಲಾ ಒತ್ತಾಯಿಸಿದ್ದಾರೆ.

ಮಳಖೇಡದ ಅಲ್ಟಾçಟೆಕ್, ಪಟ್ಟಣದ ವಾಸವದತ್ತ, ಕೋಡ್ಲಾದ ಶ್ರೀ ಸಿಮೆಂಟ್‌ನವರು ತಮ್ಮ ಸಿಎಸ್‌ಆರ್ ಅನುದಾನದಲ್ಲಿ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ನಾಮ್‌ಕೇವಾಸ್ತೆ ಸಣ್ಣ ಕೆಲಸ ಮಾಡಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತೆ ಎಂದು ಜನ ಜಮೀನು ನೀಡಿದ್ದಾರೆ. ಆದರೆ ಅನ್ಯ ರಾಜ್ಯದವರು ನೌಕರಿ ಪಡೆದಿದ್ದಾರೆ. ಜಮೀನು ಕಳೆದುಕೊಂಡ ಕುಟುಂಬಗಳು ಗುಳೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರಿಗೆ ಉದ್ಯೋಗ ಕೊಟ್ಟು ಗುಳೆ ತಪ್ಪಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net